ದುಬಾರಿ ಬಡ್ಡಿದರದ ಆಮಿಷ ನೀಡಿ ಜನರಿಗೆ ವಂಚಿಸಿದ ದರ್ವೇಶ ಕಂಪನಿ ಲಿಂಗಸಗೂರಿನಲ್ಲಿ ಆಫೀಸ್ ಬಂದ್!!?
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ದುಬಾರಿ ಬಡ್ಡಿದರ ನೀಡುವುದಾಗಿ ವಂಚಿಸಿ ಜನರಿಂದ ಕೋಟ್ಯಂತರ ಹಣ ಎತ್ತುವಳಿ ಮಾಡಿದೆ ಎನ್ನಲಾದ ದರ್ವೇಶ ಕಂಪನಿಯು ಲಿಂಗಸಗೂರಿನಲ್ಲಿಯು ಆಫೀಸ್ ಬಂದ್ ಮಾಡಿರುವುದಾಗಿ ಕೇಳಿ ಬರುತ್ತಿದೆ
ಇತ್ತೀಚೆಗೆ ರಾಯಚೂರಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ದುಬಾರಿ ಬಡ್ಡಿದರದ ಆಮೀಷ್ ನೀಡುವುದರ ಮೂಲಕ ಸಾರ್ವಜನಿಕರಿಂದ ಸಾವಿರಾರು ಕೋಟಿ ವಂಚನೆ ಮಾಡಿದ್ದು ಅದರ ವಿರುದ್ದ ಕ್ರಮಕ್ಕೆ ಒತ್ತಾಯಿಸಿ ಹೋರಾಟ ಮಾಡಲಾಗುತ್ತಿದೆ ಎಂದು ಮಾಧ್ಯಮದಲ್ಲಿ ಬಂದಿತ್ತು ಅದರ ಶಾಖೆಗಳು ಜಿಲ್ಲೆಯ ಎಲ್ಲಾ ಕಡೆ ಇರುವುದಾಗಿ ಹೇಳಲಾಗಿತ್ತು ಅದರಂತೆ ಲಿಂಗಸಗೂರಿನಲ್ಲಿಯು ಮಾಹಿತಿ ಕಲೆಹಾಕಿದಾಗ ಒಂದಿಷ್ಟು ಅಸ್ಪಷ್ಟ ಮಾಹಿತಿಗಳು ಕೇಳಿಬಂದಿದ್ದು ಇಲ್ಲಿಯು ಸಾಕಷ್ಟು ಜನರಿಗೆ ವಂಚನೆಯಾಗಿದೆ ಎನ್ನುವ ಮಾಹಿತಿ ದೊರಕಿತು
ಪಟ್ಟಣದ ಅಂಚೆಕಛೇರಿ ಎದುರಿನಲ್ಲಿ ದರ್ವೇಶ ಕಂಪನಿಯ ಶಾಖೆಯನ್ನು ತೆರೆಯಲಾಗಿತ್ತು ಎಂದು ಹೇಳಲಾಗುತ್ತಿದ್ದು ಸದ್ಯ ಅಲ್ಲಿ ಯಾವುದೆ ಆಫೀಸ್ ಕಂಡು ಬರುವುದಿಲ್ಲ ಈ ಮೊದಲು ಅಲ್ಲಿತ್ತು ಆದರೆ ಈಗ ಬಂದ್ ಆಗಿದೆ ಎನ್ನುವ ಮಾತುಗಳು ಕೇಳಿ ಬರುತ್ತಿವೆ
ಅಲ್ಲದೆ ಇದರ ಹಿಂದೆ ಮಹಿಳೆಯೊಬ್ಬರು ಇದ್ದು ಅವರು ಜನರಿಂದ ಸಾಕಷ್ಟು ಪ್ರಮಾಣದಲ್ಲಿ ದುಡ್ಡು ಹಾಕಿಸಿರುವುದಾಗಿ ಹೇಳಲಾಗುತ್ತಿದ್ದು ದರ್ವೇಶ ಕಂಪನಿಯು ಬಂದ್ ಆಗುತ್ತಿರುವಂತೆ ಆ ಮಹಿಳೆಯು ಕಾಣೆಯಾಗಿದ್ದಾಳೆ ಎನ್ನುವ ಮಾತುಗಳು ಕೇಳಿಬರುತ್ತಿವೆ
ಒಟ್ಟಾರೆಯಾಗಿ ಸಾರ್ವಜನಿಕರಿಗೆ ವಂಚನೆ ಮಾಡಿದ ದರ್ವೇಶ ಕಂಪನಿಯ ಕಬಂದ ಬಾಹುಗಳು ಲಿಂಗಸಗೂರಿನಲ್ಲಿಯು ಹರಡಿದ್ದು ಎಷ್ಟುಹಣ ವಂಚನೆಯಾಗಿದೆ ಎನ್ನುವುದು ಮಾತ್ರ ನಿಗೂಢವಾಗಿದೆ ಹಣಕಳೆದುಕೊಂಡವರು ಪ್ರಕರಣ ದಾಖಲಿಸಿದಾಗ ಮಾತ್ರ ಅದರ ಒಳಾಂತರಗಳು ಹೊರಬರಲಿವೆ ಅಲ್ಲವೇ..?
ಸದರಿ ಕಂಪನಿಯಿಂದ ನೊಂದವರು ಇದ್ದರೆ ಪತ್ರಿಕೆ ಯನ್ನು ಸಂಪರ್ಕಿಸಿ:9972890715