ಮುದಲ್: ಮೊಹರಂ ಹಬ್ಬದ ಶಾಂತಿ ಸಭೆ:ಸಾರ್ವಜನಿಕರು ಶಾಂತಿಯುತವಾಗಿ ಮೊಹರಂಆಚರಿಸಿ-ಎಸ್ಪಿ ಪುಟ್ಟಮಾದಯ್ಯ
ಕಲ್ಯಾಣ ಕರ್ನಾಟಕ ವಾರ್ತೆ
ವಿವಿಧ ಇಲಾಖೆ ಅಧಿಕಾರಿಗಳು ಭಾಗಿ
*ಶಾಂತಿಯುತವಾಗಿ ಆಚರಣೆಗೆ ಮನವಿ.
*ಕುಡಿಯುವ ನೀರು ಮಹಿಳೆಯರಿಗೆ ಶೌಚಾಲಯ ಆದ್ಯತೆ
*ಸಾರ್ವಜನಿಕರು ಹೊಂದಾಣಿಕೆಯಿಂದ ಹಬ್ಬ ಆಚರಣೆ ಮಾಡಲು ಮನವಿ
ಮುದಗಲ್ : ಐತಿಹಾಸಿಕ ಹಿಂದೂ ಮುಸ್ಲಿಂ ಭಾವೈಕ್ಯತೆ ಮೊಹರಂ ಹಬ್ಬದ ಪ್ರಯುಕ್ತ ಪಟ್ಟಣದ ಭಾರತ ಕಲ್ಯಾಣ ಮಂಟಪದಲ್ಲಿ ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ. ಎಂ.ಅಧ್ಯಕ್ಷತೆ ಶಾಂತಿ ಸಭೆ ಸೋಮವಾರ ಜರುಗಿತು.
ಪ್ರಾಸ್ಥಾವಿಕವಾಗಿ ಹೆಚ್ಚುವರಿ ಜಿಲ್ಲಾ
ಪೊಲೀಸ್ ವರಿಷ್ಠಾಧಿಕಾರಿ ಶಿವಕುಮಾರ. ತಹಶೀಲ್ದಾರ ಶಾಂಶಲಂ.ಮುಖ್ಯಾಧಿಕಾರಿ ನಬಿ. ಎಂ. ಕಂದಗಲ್ ಮುಸ್ಲಿಂ ಧರ್ಮ ಗುರುಗಳಾದ ಜಮೀರ್ ಅಹಮದ್ ಖಾಜಿ ಗುರುಬಸಪ್ಪ ಸಜ್ಜನ.ಮಾತನಾಡಿದರು.ವಿವಿಧ ಇಲಾಖೆ ಸಹಕಾರದೊಂದಿಗೆ ಮೊಹರಂ ಹಬ್ಬ ಆಚರಣೆ ಮಾಡಲು ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಹೊಂದಾಣಿಕೆಯಿಂದ ಶಾಂತಿಯುತವಾಗಿ ಆಚರಣೆ ಮಾಡಬೇಕು ಮೂಲಭೂತ ಸೌಕರ್ಯ ಸೇರಿದಂತೆ ಯಾವುದೆ ತೊಂದರೆಯಾಗದಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಲಾಗುವದು ಎಂದು ರಾಯಚೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪುಟ್ಟಮಾದಯ್ಯ. ಎಂ.ಹೇಳಿದರು.
ಈ ಸಂದರ್ಭದಲ್ಲಿ ಲಿಂಗಸುಗೂರ ಡಿವೈಎಸ್ಪಿ ದತ್ತಾತ್ರೇಯ ಕರ್ನಾಡ. ಮಸ್ಕಿ ಸಿಪಿಐ ಬಾಲಚಂದ್ರ ಲಕಂ. ಮುದಗಲ್ ಪಿಎಸ್ಐ ವೆಂಕಟೇಶ. ಎಂ. ದರ್ಗಾ ಕಮಿಟಿ ಅಧ್ಯಕ್ಷ ಎಸ್. ಎ. ನಯೀಮ್. ಪುರಸಭೆ ಸದಸ್ಯರದಾ ಮೈಬುಬಸಾಬ ಕಡ್ಡಿಪುಡಿ.ಅಮೀರ್ ಬೇಗ್ ಉಸ್ತಾದ. ಬಸವರಾಜ ಬಂಕದಮನಿ.ಉಪತಹಶೀಲ್ದಾರ ತುಳಜಾರಾಮ ಸಿಂಗ್ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಸಾರ್ವಜನಿಕರು ಉಪಸ್ಥಿತರಿದ್ದರು.