ಆನ್ವರಿ: ಶಾಲಾ ಕಟ್ಟಡದ ಛತ್ತು ಕುಸಿತ,ವಿದ್ಯಾರ್ಥಿ ಗೆ ಗಾಯ,ಅಧಿಕಾರಿಗಳ ಭೇಟಿ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಿನ ಆನ್ವರಿ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡದ ಛತ್ತು ಕುಸಿತವಾಗಿ ವಿದ್ಯಾರ್ಥಿ ಗೆ ಗಾಯಗಳಾಗಿದ್ದು ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿದ್ದಾರೆ
ಎರಡು ವರ್ಷಗಳ ಹಿಂದೆ ಅಷ್ಟೇ ನಿರ್ಮಾಣಗೊಂಡ ಶಾಲಾ ಕೊಠಡಿ ಕುಸಿದು 1ನೇ ತರಗತಿಯ ವಿದ್ಯಾರ್ಥಿ ಅರುಣ್ ತಂದೆ ಗಂಗಪ್ಪ ತಲೆಗೆ ಗಂಭೀರ ಪೆಟ್ಟಾಗಿದ್ದು, ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಆನ್ವರಿ ಗೆ ದಾಖಲಿಸಲಾಗಿದ್ದು ಹೊಲಿಗೆಗಳು ಬಿದ್ದಿದ್ದಿ ಚಿಕಿತ್ಸೆ ನೀಡಿ ಮನೆಗೆ ಕಳುಹಿಸಲಾಗಿದೆ ಎಂದು ತಿಳಿದು ಬಂದಿದೆ
ಕಟ್ಟಡ ಕುಸಿತಕ್ಕೆ ಕಳಪೆ ಕಾಮಗಾರಿ ಯೆ ಕಾರಣವೆಂದು ಆರೋಪಿಸಲಾಗಿದೆ ನೂತನವಾಗಿ ನಿರ್ಮಾಣಗೊಂಡ ಕಟ್ಟಡ ಸಂಪೂರ್ಣವಾಗಿ ಕಳಪೆಯಾಗಿದ್ದು, ಈ ಘಟನೆಯ ಹೊಣೆಯನ್ನು ಕಟ್ಟಡ ನಿರ್ಮಾಣದ ಗುತ್ತಿಗೆದಾರರು ಹಾಗೂ ಸಂಬಂಧಪಟ್ಟ ಜನಪ್ರತಿನಿಧಿಗಳು ಇಲಾಖೆಯವರು ಕಾರಣ. ಇವರ ಮೇಲೆ ಸೂಕ್ತ ಕಾನೂನು ಕ್ರಮ ಆಗಬೇಕು.ಎಂದು ಸಂಘಟನೆ ಗಳು ಒತ್ತಾಯಿಸಿವೆ
ಕೆಕೆಆರ್ ಡಿಬಿ ಅಧ್ಯಕ್ಷರನ್ನು ಒಳಗೊಂಡು ಸಂಪೂರ್ಣ ತನಿಖೆ ಮಾಡಿ ಈ ಕಟ್ಟಡ ನಿರ್ಮಾಣಕ್ಕೆ ಬಿಡುಗಡೆಗೊಂಡ ಅನುದಾನವನ್ನು ವಾಪಸ್ ಪಡೆದುಕೊಂಡು ಹೊಸ ಕಟ್ಟಡವನ್ನು ನಿರ್ಮಾಣ ಮಾಡಬೇಕು. ಕೆಕೆಆರ್ ಡಿಬಿ ಯಿಂದ ಗುತ್ತಿಗೆದಾರನ ಲೈಸೆನ್ಸ್ ರದ್ದು ಆಗಬೇಕು ಎಂದು ಎಸ್ಎಫ್ಐ ಒತ್ತಾಯಿಸುತ್ತದೆ.
ತಕ್ಷಣೆವೇ ಗಾಯಗೊಂಡ ವಿದ್ಯಾರ್ಥಿಯ ಸಂಪೂರ್ಣ ಆಸ್ಪತ್ರೆ ವೆಚ್ಚವನ್ನು ಸಂಬಂಧಪಟ್ಟ ಸರ್ಕಾರ ಹೊರಬೇಕು. ಹಾಗೂ ಕುಟುಂಬಕ್ಕೆ ಪರಿಹಾರ ನೀಡಬೇಕು.
ನಿರ್ಲಕ್ಷ್ಯ ವಹಿಸಿದರೆ ಬಿಇ ಓ ಕಚೇರಿ ಎದುರು ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುವುದು ಎಂದು ಎಸ್ಎಫ್ಐನ ರಮೇಶ ವೀರಾಪೂರ ,ವಿಶ್ವ ಅಂಗಡಿ ಹೇಳಿದ್ದಾರೆ
*******
ಸ್ಥಳ ಕ್ಕೆ ಅಧಿಕಾರಿಗಳ ಭೇಟಿ: ಸುದ್ದಿ ತಿಳಿಯುತ್ತಿರುವಂತೆ ತಾಲೂಕಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ, ಶಿಕ್ಷಣ ಅಧಿಕಾರಿ ಹುಂಬಣ್ಣ ರಾಢೋಡ ಘಟನೆಯನ್ನು ಪರಿಶೀಲಿಸಿದ್ದಾರೆಂದು ತಿಳಿದು ಬಂದಿದೆ