ಮುದಗಲ್: ಐತಿಹಾಸಿಕ ಕೋಟೆ ಬುರ್ಜ್ ಹಾಳು,ಜನರ ಆಕ್ರೋಶ
ಕಲ್ಯಾಣ ಕರ್ನಾಟಕ ವಾರ್ತೆ
ಮುದಗಲ್: ರಾಯಚೂರು ಜಿಲ್ಲೆಯ ಲಿಂಗಸಗೂರು ತಾಲ್ಲೂಕಿನ ಮುದಗಲ್ ನಲಿ ಸ್ವಚ್ಛತೆ ನೆಪದಲಿ ಐತಿಹಾಸಿಕ ಕೋಟೆ ಕೆಡವಿದ ಘಟನೆ ಶುಕ್ರವಾರ ನಡೆದಿದೆ.ಕೋಟೆ ದಕ್ಕೆ ಮಾಡಿರುವುದು ಇತಿಹಾಸ ಪ್ರಿಯರ ಹಾಗೂ ಸಾರ್ವಜನಿಕ ರು ಆಕ್ರೋಶ ವ್ಯಕ್ತಪಡಿಸಿದ್ದಾರೆ
ಮುದಗಲ್ ಕೋಟೆಯು ಐತಿಹಾಸಿಕ ತಾಣವಾಗಿದ್ದು ಅದನ್ನು ರಕ್ಷಣೆ ಮಾಡುವುದು ಜವಾಬ್ದಾರಿ ಯಾಗಿದೆ ಆದರೆ
ಮೊಹರಂ ಹಬ್ಬದ ನಿಮಿತ್ತ ಜೋಕಾಲಿ/ತೊಟ್ಟಿಲು ಹಾಕಲು ರೂ. 15 ಲಕ್ಷಗಳಿಗೆ ನೆಲ ಬಾಡಿಗೆ ನೀಡಿದ ನಿಮಿತ್ತ ಅವರಿಗೆ ಸ್ಥಳ ಅವಕಾಶ ಕಲ್ಪಿಸಲು ಪುರಸಭೆಯ ಜೆಸಿಬಿ ಯಂತ್ರ ಬಳಕೆ ಮಾಡಿಕೊಂಡು ಐತಿಹಾಸಿಕ ಕೋಟೆಗೆ ದಕ್ಕೆಗೊಳಿಸಿ ಹಾಳು ಮಾಡಿದ್ದಾರೆ.
ಕೋಟೆಯ ಕಲ್ಲುಗಳು ಕಂದಕ ಭಾಗದಲ್ಲಿ ಹಾಕಿ ಅದರ ಮೇಲೆ ಮರಮ ಹಾಕಿ ಮುಚ್ಚಿದ್ದಾರೆ. ಕೋಟೆ ಕೆಡವಿದ ಬಗ್ಗೆ ಪಟ್ಟಣದ ನಿವಾಸಿಗಳು ವಿರೋಧ ವ್ಯಕ್ತ ಪಡಿಸಿದರೆ, ಅವರಿಗೆ ಬೇಜವ್ದಾರಿ ಮಾತುಗಳನ್ನು ಆಡಿದರು. ಪುರಸಭೆ ಹಣದ ಆಸೆಗಾಗಿ ಐತಿಹಾಸಿಕ ಕೋಟೆ ಧ್ವಂಸ ಮಾಡುವುದು ಖಂಡನೀಯ ಎಂದು ಶರಣಪ್ಪ ಅವರು ದೂರಿದರು.
ಪುರಸಭೆಯವರು ಕೋಟೆ ಭಾಗ ಸ್ವಚ್ಛ ಮಾಡಲು ಪ್ರಾಚ್ಯವಸ್ತು ಇಲಾಖೆ ಇಲ್ಲವೇ ಪ್ರವಾಸೋದ್ಯಮ ಇಲಾಖೆಯಿಂದ ಪರವಾನಿಗೆ ಪಡೆಯದೆ, ತಮ್ಮ ಮನಸೋ ಇಚ್ಛೆಯಂತೆ ಸ್ವಚ್ಛತೆ ಮಾಡಲು ಮುಂದಾಗಿದ್ದಾರೆ. ಜೋಕಾಲಿ/ತೊಟ್ಟಿಲು ಹಾಕಲು ತಮ್ಮ ಮನಸೋ ಇಚ್ಛೆಯ ಖಾಲಿ ಜಾಗ ತೋರಿಸುತ್ತಿದ್ದಾರೆ. ಆದರೆ ಕಡತದಲ್ಲಿ ಚಾವಡಿ ಕಟ್ಟಿಯ ಹಿಂಭಾಗದ ಸ್ಥಳದಲ್ಲಿ ಜೋಕಾಲಿ/ತೊಟ್ಟಿಲು ಹಾಕಲು ಸ್ಥಳ ನೀಡಿದ್ದೇವೆ ಎಂದು ನಮೋದ ಮಾಡಿದ್ದಾರೆ. ಐತಿಹಾಸಿಕ ಸ್ಮಾರಕ ಸ್ಥಳದಿಂದ 300 ಮೀ. ಅಂತರದಲ್ಲಿ ಸ್ಥಳ ಬಳಕೆ ಮಾಡಲು ನಿಷೇಧಿಸಿದೆ. ಆದರೆ ಕೋಟೆಗೆ ಹೊಂದಿಕೊಂಡು ಜೋಕಾಲಿ/ತೊಟ್ಟಿಲು ಹಾಕುತ್ತಿದ್ದಾರೆ. ಇವುಗಳನ್ನು ಅಳವಡಿಸಲು ನಿಷೇಧಿತ ಪ್ರದೇಶದಲ್ಲಿ ಬಾರಿ ವಾಹನಗಳನ್ನು ಬಳಕೆ ಮಾಡುತ್ತಿದ್ದಾರೆ.
ಕೋಟೆ ಕೆಡವಿರುವುದು ಅಲ್ಲದೇ ಬೇರೆಡೆಯಿಂದ ಮರಮ ತರಸಿ ಕಂದಕ ಮುಚ್ಚಿರುವದರಿಂದ ಕಂದಕದಲ್ಲಿ ನಿಂತ ನೀರು ಬೇರೆಡೆ ಹರಿಯಲು ಆಗದೆ ನಿಂತಲ್ಲೆ ನಿಂತು ಗಬ್ಬೇದ್ದು ನಾರುತ್ತಿವೆ. ಮಲೀನ ನೀರು ಹೊರ ಹಾಕಲು ಪುರಸಭೆಯ ಹಣ ಬಳಕೆ ಮಾಡಿ ಟ್ರ್ಯಾಕ್ಟರ್ ಅಳವಡಿಸಿ ನೀರು ಹೊರ ಹಾಕುತ್ತಿದ್ದಾರೆ.
ಕೋಟೆ ಕೆಡವಿರ ಮುಖ್ಯಾಧಿಕಾರಿಗಳ ವಿರುದ್ಧ ಸಂಬಂಧಿಸಿದ ಅಧಿಕಾರಿಳು ಕ್ರಮ ತಗೆದುಕೊಳ್ಳಬೇಕು.
-ಬಸವರಾಜ ಬಂಕದಮನಿ
ಅಧ್ಯಕ್ಷರು, ಡಿ.ಎಸ್.ಎಸ್. ಮುದಗಲ್ ಘಟಕ.
ಕೋಟೆ ಮೇಲೆ ಬೆಳೆದ ಗಿಡಗಳನ್ನು ತೆಗೆಯಲು ಜೆಸಿಬಿ ಬಳಕೆ ಮಾಡಿಕೊಂಡಿದ್ದೇವೆ. ಕೋಟೆ ಧ್ವಂಸ ಮಾಡಲ್ಲ.
ನಬಿ. ಎಂ. ಕಂದಗಲ್
ಮುಖ್ಯಾಧಿಕಾರಿಗಳು ಮುದಗಲ್