ಲಿಂಗಸಗೂರು:ವಿಜಯಮಹಾಂತೇಶ್ವರ ಮಠದಲ್ಲಿ ಕಳ್ಳತನ ಪ್ರಕರಣ,ಸ್ವಾಮೀಜಿ ಕೈವಾಡ ವದಂತಿ, ಅಲ್ಲಗಳೆದ ಶ್ರೀಗಳು!!?

Laxman Bariker
ಲಿಂಗಸಗೂರು:ವಿಜಯಮಹಾಂತೇಶ್ವರ ಮಠದಲ್ಲಿ ಕಳ್ಳತನ ಪ್ರಕರಣ,ಸ್ವಾಮೀಜಿ ಕೈವಾಡ ವದಂತಿ, ಅಲ್ಲಗಳೆದ ಶ್ರೀಗಳು!!?
WhatsApp Group Join Now
Telegram Group Join Now

ಲಿಂಗಸಗೂರು:ವಿಜಯಮಹಾಂತೇಶ್ವರ ಮಠದಲ್ಲಿ ಕಳ್ಳತನ ಪ್ರಕರಣ,ಸ್ವಾಮೀಜಿ ಕೈವಾಡ ವದಂತಿ, ಅಲ್ಲಗಳೆದ ಶ್ರೀಗಳು!!?

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ಪಟ್ಟಣದಲಿರುವ ವಿಜಯಮಹಾಂತೇಶ್ವರ ಶಾಖಾಮಠದಲ್ಲಿ ಹಣ ಆಭರಣ ಸೇರಿ ಸುಮಾರು ೩೯ಲಕ್ಷ ಕಳ್ಳತನವಾಗಿದೆ ಎಂದು ಪ್ರಕರಣ ದಾಖಲಾಗಿತ್ತು ಅದರ ಬೆನ್ನಹಿಂದೆಯೆ ಸದರಿ ಪ್ರಕರಣದಲ್ಲಿ ಸ್ವಾಮೀಜಿಯ ಕೈವಾಡ ಇದೆ ಎಂದು ವದಂತಿಗಳು ಮಾಧ್ಯಮಗಳಲ್ಲಿ ಹರಿದಾಡಿತು ಆದರೆ ಅಂತಹ ಯಾವುದೆ ಕೈವಾಡವಿಲ್ಲವೆಂದು ಸಿದ್ದಲಿಂಗಸ್ವಾಮೀಜಿಯವರು ಕಲ್ಯಾಣ ಕರ್ನಾಟಕ ಪತ್ರಿಕೆಗೆ ಮಾಹಿತಿ ನೀಡಿದರು


ಪಟ್ಟಣದ ಬಸವಸಾಗರ ಕ್ರಾಸ್ ಹತ್ತಿರವಿರುವ ವಿಜಯಮಹಾಂತೇಶ್ವರ ಮಠದಲ್ಲಿ ಗುರುವಾರ ರಾತ್ರಿ ಕಳ್ಳರು ಭಕ್ತರ ವೇಷದಲ್ಲಿ ಬಂದು ಮಲಗಲು ಸ್ಥಳ ನೀಡಿರೆಂದು ಕೇಳಿ ರಾತ್ರಿಯಲಿ ಸ್ವಾಮೀಜಿಗಳ ಕೋಣೆಯನ್ನು ತೆರೆಯಿಸಿ ಅವರಿಗೆ ಮಾರಕಾಸ್ತç ತೋರಿಸಿ ತಿಜೋರಿಯಲ್ಲಿರುವ ಹಣ ಹಾಗೂ ಬಂಗಾರದ ಒಡವೆಗಳನ್ನು ನೀಡಬೇಕೆಂದು ಬೆದರಿಕೆ ಹಾಕಿ ತಿಜೋರಿಯಲ್ಲಿರುವ ನಗದು ಹಣ ಹಾಗೂ ಬಂಗಾರದ ಒಡವೆಗಳನ್ನು ಸ್ವತಃ ಸ್ವಾಮೀಜಿಯ ಕೈಗಳಿಂದಲೆ ಕಳ್ಳರು ಪಡೆದುಕೊಂಡು ಹೋಗಿದ್ದಾರೆಂದು ಸ್ವಾಮೀಜಿಗಳೆ ಹೇಳುತ್ತಾರೆ
ಸ್ವಾಮೀಜಿ ಕೈವಾಡ ವದಂತಿ ಸುದ್ದಿ: ಸ್ವತಃ ಸ್ವಾಮೀಜಿಗಳೆ ಮಠದಲ್ಲಿರುವ ಹಣ ಕಳುವಾಗಿದೆ ಎಂದು ಹೇಳುತ್ತಾರೆ ಆದರೆ ಕೆಲಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಹಣ ಕಳುವಿನ ಪ್ರಕರಣದಲ್ಲಿ ಸ್ವಾಮೀಜಿಯ ಕೈವಾಡವಿದೆಯಾ ಎನ್ನುವ ಮಾತುಗಳು ಹರಿದಾಡುತ್ತಿವೆ ಅಷ್ಟೆ ಅಲ್ಲದೆ ತನಿಖೆ ನಡೆದರೆ ಸ್ವಾಮೀಜಿಯೆ ಕಂಬಿಹಿAದೆ ಹೋಗಬಹುದು ಎನ್ನುವ ಮಾತುಗಳು ಕೇಳಿ ಬರುತ್ತಿವೆ ನಾವು ಕಲಬುರ್ಗಿ ಕಡೆಯವರು ಮಠದಲ್ಲಿ ಉಳಿದುಕೊಳ್ಳಲು ನಮಗೆ ಜಾಗಕೊಡಿ ಎಂದು ಕೇಳುತ್ತಾ ಬಂದ ಆಗಂತಕರು ರಾತ್ರಿಯಲ್ಲಿ ಎದ್ದು ಸ್ವಾಮೀಜಿಯ ಕೋಣೆಗೆ ಹೋಗಿ ಬಾಗಲು ತೆಗೆಯಿಸಿ ಹಣಪಡೆದರು ಎನ್ನುವಾಗ ಅಲ್ಲಿವರೆಗೆ ಮಠದಲ್ಲಿರುವ ಸಿಸಿಕ್ಯಾಮರಾಗಳಲ್ಲಿ ಕಳ್ಳರ ಚಲನವಲನ ಪತ್ತೆಯಾಗಬೇಕಲ್ಲವೆ? ಕಳುವಿಗೆ ಬಂದ ಸಂದರ್ಭದಲ್ಲಿ ಸಿಸಿ ಕ್ಯಾಮರಾ ಬಂದ್ ಮಾಡಿದ್ದರು ಅಲ್ಲಿಯವರೆಗೆ ಅದರಲ್ಲಿ ಚಲನವಲನ ದಾಖಲಾಗಿರಬಹುದಲ್ಲವೆ ಎನ್ನುವುದು ಸಾರ್ವಜನಿಕರ ಪ್ರಶ್ನೆಯಾಗಿದೆ ಅಲ್ಲದೆ ಮಠದಲ್ಲಿ ಯಾರು ಇರಲಿಲ್ಲವೇ? ರಾತ್ರಿ ೧೨ರವರೆಗೆ ಚಾಲನೆಯಲ್ಲಿದ್ದ ಸಿಸಿ ಕ್ಯಾಮರಾಗಳು ಇದ್ದಕಿದ್ದಂತೆ ಬಂದ್ ಆಗಿದ್ದು ಯಾಕೆ ನಂತರ ಎರಡು ಗಂಟೆಯ ಮೇಲೆ ಆನ್ ಆಗಿದ್ದು ಯಾಕೆ ಅದರ ಮಾಹಿತಿಯನ್ನು ಸ್ವಾಮೀಜಿ ಯಾಕೆ ಕೊಡುತ್ತಿಲ್ಲ ಅದರ ಬಗೆಗೆ ಮಾತನಾಡುವುದಿಲ್ಲ ಯಾಕೆ ಕೊನೆಯಬಾರಿ ಕ್ಯಾಮರಾ ಆಫ್ ಮಾಡಿದಾಗ ಸ್ವಾಮೀಜಿಯ ಬೆರಳಚ್ಚು ಇದೆ ಎನ್ನುವ ಬಲವಾದ ಮಾತುಗಳು ಒಂದೆಡೆೆ ಹಾಗಾದರೆ ಇದು ಸ್ವಾಮೀಜಿ ಆಡಿರುವ ಕಳ್ಳತನದ ನಾಟಕವೇ ಎನ್ನುವ ವದಂತಿಗಳೊ ನಿಜವೋ ಸುದ್ದಿಗಳಂತು ಹಬ್ಬಿವೆ
ಸ್ವಾಮೀಜಿ ಹೇಳುವುದೇನು?: ಮಠಕ್ಕೆ ಭಕ್ತರು ಕೊಟ್ಟಹಣ ಹಾಗೂ ಒಡವೇ ಇದ್ದದ್ದು ನಿಜ ನನಗೂ ಒಮ್ಮೊಮ್ಮೆ ಬಂಗಾರದ ಮೇಲೆ ಆಸೆ ಬರುತ್ತದೆ ಬಂಗಾರದ ಉಂಗುರ ಹಾಕಿಕೊಳ್ಳಲು ಯತ್ನಿಸಿದ್ದು ಉಂಟು ಗ್ಯಾಸ್ ಮೇಲೆ ಉಂಗುರಕಾಯಿಸಿ ಸರಿಪಡಿಸಿಕೊಂಡು ಕೈಗೆ ಹಾಕಲು ಯತ್ನಿಸಿದ್ದೆ ಮಠದ ಆಸ್ತಿಯಾಗಿರುವ ಹಣ ಹಾಗೂ ಒಡವೆಗಳ ಲೆಕ್ಕವನ್ನು ಯಾರು ಕೇಳುವುದಿಲ್ಲ ಅದನ್ನು ಯಾಕೆ ಹೇಗೆ ಖರ್ಚು ಮಾಡಿದೆ ಎನ್ನುವವರು ಇಲ್ಲ ಅದನ್ನು ನಾನು ನೇರವಾಗಿ ಬಳಕೆ ಮಾಡಿಕೊಳ್ಳಬಹುದು ಜಾಲತಾಣದಲ್ಲಿ ಕೆಲಮಾಧ್ಯಮದಲ್ಲಿ ಬಂದ ಹಾಗೆ ಕೆಲಜನರು ಆಡುವ ಹಾಗೆ ನಾನೆ ಯಾಕೆ ಕಳ್ಳತನದ ನಾಟಕವಾಡಲಿ ಅಂತಹ ಪ್ರಮೇಯೆ ಉದ್ಭವವಾಗುವುದಿಲ್ಲ ಮಠದ ಆಸ್ತಿ ಕಳುವಾಗಿರುವುದರಿಂದ ನನಗೆ ದುಃಖವಾಗಿದೆ ಎಂದು ಹೇಳುತ್ತಾರೆ
ಸದರಿ ಪ್ರಕರಣವು ಲಿಂಗಸಗುರು ಠಾಣೆಯಲ್ಲಿ ದಾಖಲಾಗಿದ್ದು ಪ್ರಕರಣದ ಬೆನ್ನುಹತ್ತಿರುವ ಪೊಲೀಸ್ ಸರಿಯಾಗಿ ತನಿಖೆ ನಡೆಸಿದರೆ ನಿಜಕಳ್ಳರ ಅಸಲಿತನ ಹೊರಬರಬಹುದು ಅಲ್ಲವೇ?

WhatsApp Group Join Now
Telegram Group Join Now
Share This Article