ಸಮಾಜ ಕಲ್ಯಾಣ ಇಲಾಖೆ ಹಾಸ್ಟೆಲ ನಿರ್ವಹಣೆ ವೆಚ್ಚದ ಬಿಲ್ ತಡೆಗೆ ತಾಪಂ ಅಧಿಕಾರಿಗೆ ಮರಳಿ ಒತ್ತಾಯ!
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರ,: ತಾಲೂಕ ಸಮಾಜ ಕಲ್ಯಾಣ ಕಛೇರಿ ಹಾಗೂ ವ್ಯಾಪ್ತಿಯಲ್ಲಿ ಬರುವ ಆಶ್ರಮ ಮೆಟ್ರಿಕ ಪೂರ್ವ ನಂತರದ ವಸತಿ ನಿಲಯಗಳ ನಿರ್ವಹಣೆ ಬಿಲ್‌ಗಳನ್ನು ತಡೆದು ಖುದ್ದಾಗಿ ಸಂಪೂರ್ಣ ಪರಿಶಿಲಿಸಿ ಬಿಲ ಮಾಡಲು ತಾಲೂಕು ಪಂಚಾಯತ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ದೂರುಸಲ್ಲಿಸಿದ ಭೀಮಘರ್ಜನೆ ತಾಲೂಕು ಅಧ್ಯಕ್ಷ ದಲಿತ ಮುಖಂಡ ಬಸವರಾಜ ಮರಳಿ ಲಿಖಿತ ಮನವಿ ಮೂಲಕ ಒತ್ತಾಯಿಸಿರುವರು.
ಸರಕಾರ ಪರಿಶೀಷ್ಠರ ಕಲ್ಯಾಣಕ್ಕಾಗಿ ಕೊಟ್ಯಾಂತರ ಅನುದಾನ ನೀಡುತ್ತದೆ ಇದು ಸದುಪಯೋಗಕಿಂತ ಅಧಿಕಾರಿಗಳ ನಿರ್ಲಕ್ಷö್ಯದಿಂದ ದುರಪಯೋಗ ಜಾಸ್ತಿ ಅದರಂತೆ ತಾಲೂಕಿನ ಸಮಾಜ ಕಲ್ಯಾಣ ಅಧಿಕಾರಿ ಕಛೇರಿ ಹಾಗೂ ವಸತಿ ನಿಲಯಗಳ ನಿರ್ವಹಣೆ ಕುರಿತಂತೆ ಮೇಲ್ವಿಚಾರಕರು ಹಾಗೂ ಅಧಿಕಾರಿಗಳ ಹಲವಾರು ನಿಯಮಗಳ ಉಲ್ಲಂಘನೆ ಹಾಗೂ ಕರ್ತವ್ಯ ಲೋಪ ಎದ್ದು ಕಾಣುತ್ತಿದೆ ಈಬಗ್ಗೆ ಇಲಾಖೆ ಸಹಾಯವಾಣಿ ಮೂಲಕ ಲಿಖಿತವಾಗಿ ಆಯುಕ್ತರುಗೆ ದೂರು ನೀಡಿದಾಗ ಎಲ್ಲಾ ನಿಯಮಾನುಸಾರ ಹಾಗೂ ಎಲ್ಲಾ ಮಕ್ಕಳ ಸಂಖ್ಯೆಗೆ ಅನುಗಣವಾಗಿ ಮೂಲಭೂತ ಸೌಕರ್ಯಗಳು ಒದಗಿಸಲಾಗಿದೆಂದು ಡಿಸೆಂಬರ ೨೦೨೩ ತಿಂಗಳಲ್ಲಿ ಇಲಾಖೆಯ ಸಹಾಯಕ ನಿರ್ದೆಶಕರು ಲಿಖಿತ ಉತ್ತರ ನೀಡಿದ್ದಾರೆ ಅದರಿಂದ ತಾವೂ ನಮ್ಮ ಮನವಿ ಸ್ವೀಕರಿಸಿ ಖುದ್ದ ಪರೀಶಲನೆಗೆ ದಲಿತ ಮುಖಂಡ ಬಸವರಾಜ ಮರಳಿ ಒತ್ತಾಯಸಿದ್ದು ತಾವೂ ನಿರ್ಲಕ್ಷö್ಯವಹಿಸಿ ಬಿಲ್ ನೀಡಿದರೆ ತಮ್ಮ ವಿರದ್ದ ದೂರ ನೀಡುವದಾಗಿ ಮರಳಿ ತಿಳಿಸಿದ್ದಾರೆ