ಜೀವದ ಹಂಗು ತೊರೆದು ದರೋಡೆಕೋರರ ಬೆನ್ನಟ್ಟಿದ ಪೊಲೀಸ್, ವಾಹನ ಜಖಂ,ಮೂವರ ಬಂಧನ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ದರೋಡೆಕೋರರ ತಂಡ ತಿಂಥಿಣಿ ಬ್ರಿಜ್ ನಿಂದ ಲಿಂಗಸಗೂರು ಕಡೆಗೆ ಬರುವ ಬಗೆಗೆ ಮಾಹಿತಿ ಪಡೆದ ಪೊಲೀಸ್ ಪಟ್ಟಣದ ಬಸವಸಾಗರ ವೃತ್ತದಲಿ ತಡೆಹಾಕಿ ಹಿಡಿಯಲು ಯತ್ನಿಸಿದಾಗ ಪೊಲೀಸ್ ರು ಗಾಯಗೊಂಡಿದ್ದು ವಾಹನ ಜಖಂಗೊಂಡ ಘಟನೆ ಶುಕ್ರವಾರ ರಾತ್ರಿ ನಡೆದಿದೆ
ಯಾದಗಿರಿ ಜಿಲ್ಲೆಯಿಂದ ಕುರಿಕಳ್ಳತನ ಹಾಗೂ ದರೋಡೆಕೋರರ ತಂಡ ಲಿಂಗಸಗೂರು ಕಡೆಗೆ ತಿಂಥಿಣಿ ಬ್ರಿಜ್ ಮಾರ್ಗವಾಗಿ ಹೊರಟಿದೆ ಎಂದು ಖಚಿತ ಮಾಹಿತಿ ತಿಳಿದ ಲಿಂಗಸಗೂರು ಪೊಲೀಸ್ ಪಿಐ ಪುಂಡಲೀಕ ಪಟತ್ತರ ನೇತೃತ್ವದ ತಂಡ ಪಟ್ಟಣದ ಬಸವಸಾಗರ ವೃತ್ತ ದಲಿ ತಡೆಹಾಕಿ ಮಾತೆ ಮಾಣಿಕೇಶ್ವರಿ ದೇವಸ್ಥಾನ ದ ಹತ್ತಿರ ಕಾದು ಕುಳಿತಿದ್ದಾರೆ
ದರೋಡೆಕೋರರ ವಾಹನ ಸ್ಕಾರ್ಪಿಯೊ ಕೆ ಎ 51 p 9229 ವಾಹನ ಬರುತ್ತಲೆ ಬೆನ್ನಟ್ಟಿದ ಪೊಲೀಸ್ ದರೋಡೆಕೋರರ ನ್ನು ಹಿಡಿಯಲು ಯತ್ನಿಸಿದಾಗ ಪೊಲೀಸ್ ರನ್ನು ಕಂಡ ದರೋಡೆಕೋರರ ತಂಡ ತಮ್ಮ ವಾಹನ ದ ವೇಗ ಹೆಚ್ಚಿಸಿದ್ದಾರೆ ಬಸವಸಾಗರ ಕ್ರಾಸ್ ಹತ್ತಿರ ತಡೆ ಹಾಕಿದ್ದರಿಂದ ಮುಂದೆ ಹೋಗಲು ಆಗದೆ ಸ್ಕಾರ್ಪಿಯೋ ವನ್ನು ಹಿಂತೆಗೆದುಕೊಳ್ಳಲು ಯತ್ನಿಸಿದ್ದ ಸಂದರ್ಭದಲ್ಲಿ ಹಿಂದೆ ಇರುವ ಪೊಲೀಸ್ ವಾಹನ ಕೆಎ36 G-0860 ಗೆ ಡಿಕ್ಕಿಯಾಗಿ ಜಖಂಗೊಂಡಿದೆ
ಸದರಿ ರಭಸಕ್ಕೆ ದರೋಡೆಕೋರರ ವಾಹನದ ಟೈರ್ ಬಸ್ಟ್ ಆಗಿ ನಿಂತಾಗ ಪೊಲೀಸ್ ಹಾಗೂ ಸಾರ್ವಜನಿಕ ರು ದರೋಡೆಕೋರರ ನ್ನು ಹಿಡಿಯಲು ಹೋದಾಗ ಪೊಲೀಸ್ ಸಿಬ್ಬಂದಿ ಮೇಲೆ ಖಾರದಪುಡಿ ಎರಚಿ, ಕಬ್ಬಿಣದ ರಾಡು, ಮಚ್ಚು ಕಲ್ಲುಗಳಿಂದ ಹೊಡೆದು ಹಲ್ಲೆ ಮಾಡಿದ್ದಾರೆ ಸಹಾಯಕ್ಕೆ ಬಂದ ಸಾರ್ವಜನಿಕ ರಿಗೂ ಕಲ್ಲುಗಳಿಂದ ಹೊಡೆದು ಗಾಯಗೊಳಿಸಿದ್ದಾರೆ ಪರಾರಿಯಾಗಲು ಯತ್ನಿಸಿದ ದರೋಡೆಕೋರರ ತಂಡದಲಿ ಐದು ಜನರಿದ್ದು ಅದರಲ್ಲಿ ಇಬ್ಬರು ಪರಾರಿಯಾಗಿದ್ದಾರೆ ಇನ್ನೂ ಮೂವರು ತಪ್ಪಿಸಿಕೊಳ್ಳಲು ಯತ್ನಿಸುತ್ತಿರುವಾಗ ರಸ್ತೆ ಬದಿ ಇದ್ದ ಗ್ರಿಲ್ ಗೆ ಡಿಕ್ಕಿ ಹೊಡೆದು ಚರಂಡಿಯ ಕಾಂಕ್ರೀಟ್ ಗೆ ಬಿದ್ದು ಗಾಯಗೊಂಡಿದ್ದಾರೆ ಗಾಯಗೊಂಡವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಲಾಗುತ್ತಿದೆ
ಲಿಂಗಸಗೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ದರೋಡೆಕೋರರು ಯಾದಗಿರಿ ಜಿಲ್ಲೆಯವರಾಗಿದ್ದು ಗುರುರಾಜ ತಂ ಸುರೇಶ ಚವಾಣ ವ25 ಕುಮಾರ ತಂ ಯಮನಪ್ಪ ಚವಾಣ ವ 28 , ಸುರೇಶ ತಂ ಪೂಲಸಿಂಗ್ ವ45, ತಿಪ್ಪಣ್ಣ@ತಿಪ್ಯಾ ತಂ ಚಂದಪ್ಪ ವ30 , ಮಾನಪ್ಪ @ಮಾನೆ ತಂ ಓಂ ರಾಠೀಡ ವ35
ಗಾಯಗೊಂಡ ಪೊಲೀಸ್ ರಂಗನಾಥ, ಸಿದ್ದಪ್ಪ ಶರಣಬಸವ, ಸಾರ್ವಜನಿಕ ರು ವೀರೇಶ ತಂಮುದಿಯಪ್ಪ, ನಾರಾಯಣ ತಂ ಹನಮಂತ
ಪಟ್ಟಣದ ಲಿ ಸೀನಿಮೀಯ ಮಾದರಿಯಲ್ಲಿ ನಡೆದ ಈ ಘಟನೆಯನ್ನು ಕಂಡ ಸಾರ್ವಜನಿಕ ರು ದಿಗ್ ಭ್ರಮೆ ವ್ಯಕ್ತಪಡಿಸಿದ್ದಾರೆ
ಪೊಲೀಸ್ ಸಾಹಸಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ
ಎಸ್ಪಿಭೇಟಿ:ಘಟನೆ ನಡೆದ ಬಗೆಗೆ ಮಾಹಿತಿ ತಿಳಿದ ಎಸ್ಪಿ ಬಿ ನಿಖಿಲ್ ರವರು ರಾತ್ರಿಯಲ್ಲಿಯೆ ಸ್ಥಳಕ್ಕೆ ಭೇಟಿ ನೀಡಿ ಪೊಲೀಸ್ ಕಾರ್ಯಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ