ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ

Laxman Bariker
ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ
WhatsApp Group Join Now
Telegram Group Join Now

ದೈಹಿಕ ಶಿಕ್ಷಣ ಶಿಕ್ಷಕರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮನವಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ದೈಹಿಕ ಶಿಕ್ಷಣ ಶಿಕ್ಷಕರು ಹಲವಾರು ವರ್ಷಗಳಿಂದ ಕೆಲಸ ನಿರ್ವಹಿಸುತ್ತಾ ಬಂದಿದ್ದು ಶಿಕ್ಷಕರಲ್ಲಿ ತಾರತಮ್ಯ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಹೆದರಿಸುತ್ತಿದ್ದು ಅವುಗಳನ್ನು ಈಡೇರಿಸುವಂತೆ ಒತ್ತಾಯಿಸಿ ಶಿಕ್ಷಣ ಆಯುಕ್ತರಿಗೆ ಬರೆದ ಮನವಿಯನ್ನು ಕ್ಷೇತ್ರ ಶಿಕ್ಷಣಾಧಿಕಾರಿಗಳ ಮೂಲಕ ಕರ್ನಾಟಕ ರಾಜ್ಯ ದೈಹಿಕ ಶಿಕ್ಷಕರ ಸಂಘದ ತಾಲೂಕಾಧ್ಯಕ್ಷೆ ಗಂಗಮ್ಮ ಕಟ್ಟಮನಿಯವರ ನೇತೃತ್ವದಲ್ಲಿ ಸಲ್ಲಿಸಲಾಯಿತು
ದೈಹಿಕ ಶಿಕ್ಷಕರಾಗಿ ಶಾಲಾ ಶಿಕ್ಷಣ ಇಲಾಖೆಯಲ್ಲಿ ಹಲವಾರು ವರ್ಷಗಳಿಂದ ಸೇವೆ ಸಲ್ಲಿಸುತ್ತಾ ಬರುತಿದ್ದು ಹಲವಾರು ಸಮಸ್ಯೆಗಳ ಮಧ್ಯ ಕೆಲಸ ಮಾಡುತ್ತಿದ್ದು ಅವುಗಳನ್ನು ಪರಿಹರಿಸಬೇಕು ದೈಹಿಕ ಶೀಕ್ಷಣ ಶೀಕ್ಷಕರನ್ನು ಸಹಶಿಕ್ಷಕರೆಂದು ಪರಿಗಣಿಸಿ ಮುಖ್ಯಶಿಕ್ಷಕರ ಮುಂಬಡ್ತಿ ನೀಡಬೇಕು ಶಿಕ್ಷಕರಿಗೆ ಸಿಗುವ ಎಲ್ಲಾ ಸೌಲಭ್ಯಗಳನ್ನು ದೈಹಿಕ ಶಿಕ್ಷಣ ಶಿಕ್ಷಕರಿಗೂ ನೀಡಬೇಕು ಪ್ರಾಥಮಿಕ ಪ್ರೌಢಶಾಲೆಯಲ್ಲಿ ಖಾಲಿ ಇರುವ ದೈಹಿಕ ಶಿಕ್ಷಣ ಶಿಕ್ಷಕರ ಹುದ್ದೆಗಳಿಗೆ ನೇಮಕಾತಿ ಮಾಡುವುದು, ಅಲ್ಲಿಯವರೆಗೆ ಅತಿಥಿ ದೈಹಿಕ ಶಿಕ್ಷಣ ಶಿಕ್ಷಕರನ್ನು ನೇಮಕಾತಿ ಮಾಡಲು ಆದೇಶ ಮಾಡುವುದು, ಸರ್ಕಾರಿ ಅನುಧಾನಿತ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಮುಖ್ಯ ಶಿಕ್ಷಕರ ಉಪಪ್ರಾಂಶುಪಾಲರ ಹುದೆಗಳು ಖಾಲಿ ಇದ್ದಲ್ಲಿ ಸೇವಾಜೇಷ್ಠತಾ ಆಧಾರದ ಮೇಲೆ ಅವಕಾಶ ನೀಡುವುದು ಎಸ್ ಎಟಿಎಸ್ ನಲ್ಲಿ ದೈಹಿಕ ಶಿಕ್ಷಣವನ್ನು ಭಾಗ ಎ ನಲ್ಲಿ ಸೇರ್ಪಡೆ ಮಾಡದಿರುವುದರಿಂದ ಗೊಂದಲಗಳಿಗೆ ಕಾರಣವಾಗಿದ್ದು ಬಗೆಹರಿಸುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಜುಲೈ ಅಂತ್ಯದೊಳಗೆ ಬಗೆಹರಿಸಬೇಕು ಇಲ್ಲವಾದರೆ ಪ್ರಸ್ತುತ ವರ್ಷದಿಂದ ಇಲಾಖೆಯ ಕ್ರೀಡಾಕೂಟಗಳನ್ನು ಬಹಿಷ್ಕರಿಸುವ ಮೂಲಕ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಹಮ್ಮಿಕೊಳ್ಳಲಾಗುವುದೆಂದು ಬರೆದ ಮನವಿಯನ್ನು ತಾಲೂಕಾ ಶೀಕ್ಷಣಾಧಿಕಾರಿಗಳ ಮೂಲಕ ಸಲ್ಲಿಸಿದರು
ಈ ಸಂದರ್ಭದಲ್ಲಿ ಸಂಘದ ತಾಲೂಕಾಧ್ಯಕ್ಷೆ ಗಂಗಮ್ಮ ಕಟ್ಟಿಮನಿ, ಗೌರವಾಧ್ಯಕ್ಷ ಶಿವಪುತ್ರ ಬೀದರ,ಪ್ರ,ಕಾ ಚಂದ್ರಶೇಖರ ಶಾಸ್ತಿçಮಠ,ಖಜಾಂಚಿ ಹೈಮಬಾದ್ ಬಾಷಾ, ಮಹಿಬೂಬ ಜಾವೂರ, ಭಾಗ್ಯಶ್ರೀ, ಬಸಮ್ಮ, ಸಾವಿತ್ರಿ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article