ಪುಸ್ತಕಗಳು ನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಮಾಧ್ಯಮ” ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಮತ.

Laxman Bariker
ಪುಸ್ತಕಗಳು ನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಮಾಧ್ಯಮ” ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಮತ.
WhatsApp Group Join Now
Telegram Group Join Now

ಪುಸ್ತಕಗಳು ನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಮಾಧ್ಯಮ” ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಭಿಮತ.

ಕಲ್ಯಾಣ ಕರ್ನಾಟಕ ವಾರ್ತೆ

ಬೆಂಗಳೂರು ಜೂ 23.
ಪುಸ್ತಕ ಓದುವುದರಿಂದ ನನಗೆ ವೇಳೆಯ ಹೋಗಿದ್ದೆ ಗೊತ್ತಾಗುವುದಿಲ್ಲ. ಸುಖ ಸುಮ್ಮನೆ ಬೇರೆ ಬೇರೆ ಹವ್ಯಾಸಗಳಲ್ಲಿ ನಾನು ಇದುವರೆಗೂ ತೊಡಗಿಕೊಳ್ಳದೆ ನನ್ನ ಕೆಲಸದ ನಂತರ ಓದುವುದನ್ನೇ ಮುಖ್ಯ ಹವ್ಯಾಸ ಮಾಡಿಕೊಂಡು ನಿರಂತರವಾಗಿ ವಿವಿಧ ಪುಸ್ತಕಗಳನ್ನ ಓದುವುದು ನನ್ನ ಜೀವನದ ಹವ್ಯಾಸದ ಕಾರ್ಯಗಳಲ್ಲಿ ಒಂದು ನಾನು ರಾಜಕಾರಣದಲ್ಲಿ ಬಿಡುವು ಸಿಕ್ಕಾಗ ಬೇರೆ ಬೇರೆ ಪುಸ್ತಕಗಳನ್ನು ಖರೀದಿಸಿ ಅವುಗಳನ್ನ ಓದುತ್ತೇನೆ ಪುಸ್ತಕಗಳನ್ನು ಓದುವುದರಿಂದ ನನಗೊಂದು ಒಂದು ರೀತಿಯ ಮಾನಸಿಕ ನೆಮ್ಮದಿ ಮನಸ್ಸಿಗೆ ಆನಂದ ಮತ್ತು ನವ ಉಲ್ಲಾಸವನ್ನ ನೀಡುತ್ತದೆ ಪುಸ್ತಕಗಳು ನಾಡಿನ ಸಾಂಸ್ಕೃತಿಕ ವೈಭವವನ್ನು ಸಾರುವ ಮಾಧ್ಯಮಗಳಾಗಿವೆ. ಕನ್ನಡ ಸರಸ್ವತ ಲೋಕದಲ್ಲಿ ಕನ್ನಡದ ಸಾಹಿತ್ಯ ಉತ್ತಮ ಸ್ಥಿತಿಯಲ್ಲಿದೆ.


ವಿಶ್ವವಿಖ್ಯಾತ ಸಾಹಿತಿಗಳ ಬಳಗ ಕರ್ನಾಟಕದಲ್ಲಿ ಜನಿಸಿ ಉತ್ತಮ ಸಾಹಿತ್ಯ ಕೃತಿಗಳನ್ನ ನಾಡಿಗೆ ನೀಡಿವೆ.
ಸಾಹಿತ್ಯದಲ್ಲಿ ಎಂಟು ಜ್ಞಾನಪೀಠ ಪ್ರಶಸ್ತಿಗಳು ಕರ್ನಾಟಕಕ್ಕೆ ಲಭಿಸಿದೆ
ಇದರಿಂದ ನಮ್ಮ ಸಾಹಿತ್ಯ
ಪರಂಪರೆಯು ದೇಶಕ್ಕೆ ಮಾದರಿಯಾಗಿದೆ. ಎಂದರು
ಅವರು ಬೆಂಗಳೂರಿನ ನಯನ ಸಭಾಂಗಣದಲ್ಲಿ
ಡಾ. ಸಿದ್ದಯ್ಯ ಪುರಾಣಿಕ ಸ್ಮಾರಕ ಟ್ರಸ್ಟ್ ಕೊಪ್ಪಳ ಮತ್ತು ಡಾ. ಸಂಗಮೇಶ್ ಬಾಗವಾಡಗಿ ಹಿತೈಷಿಗಳ ಬಳಗ ಜಂಟಿಯಾಗಿ ಹಮ್ಮಿಕೊಂಡಿದ್ದ ಪುಸ್ತಕಗಳ ಲೋಕಾರ್ಪಣೆ ಕಾರ್ಯಕ್ರಮದಲ್ಲಿ
ಡಾಕ್ಟರ್ ಸಂಗಮೇಶ್ ಬಾದವಾಡಗಿ ಅವರ
ಕಾಡು ಕಡಲಗಳ ನಾಡು ಅಂಡಮಾನ್ ಎಂಬ ಪ್ರವಾಸ ಕಥನ
ಪುಸ್ತಕವನ್ನ ಲೋಕಾರ್ಪಣೆಗೊಳಿಸಿ
ಮಾತನಾಡುತ್ತಾ ನಾನೊಬ್ಬ ಸಾಹಿತ್ಯ ಪ್ರೇಮಿ . ಪುಸ್ತಕಗಳನ್ನ ಓದುವುದರಿಂದ ಅದು
ಕೊಡುವ ಖುಷಿಯಷ್ಟು ನನಗೆ ಬೇರೆ ಯಾವುದೇ ಕಾರ್ಯಗಳು ಖುಷಿ ನಿಡುವುದಿಲ್ಲ ಗ್ರಂಥಾ ಲೇಖಕರಾದ ಶ್ರೀ ಸಂಗಮೇಶ್ ಬಾಗವಾಡಗಿಯವರು ಅಧಿಕಾರಿಯಾಗಿ ಕಲ್ಯಾಣ ಕರ್ನಾಟಕದ ಹಿತಚಿಂತಕರಾಗಿ ಸಾಹಿತ್ಯ ಲೋಕದಲ್ಲಿ ತಮ್ಮದೇ ಆದ ವರ್ಚಸ್ಸಿನೊಂದಿಗೆ ಬೆಳೆದವರು ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ
ಎರಡು ಅವಧಿಗೆ ಗೌರವ ಕಾರ್ಯದರ್ಶಿಯಾಗಿ ಸಾಹಿತಿಗಳೊಂದಿಗೆ ಸಾಹಿತ್ಯ ಸಂಘಟನೆಗಳೊಂದಿಗೆ ಗುರುತಿಸಿಕೊಂಡವರು ಸುಮಾರು 25ಕ್ಕೂ ಹೆಚ್ಚು ಸಾಹಿತ್ಯ ಕೃತಿಗಳನ್ನ ರಚಿಸಿ ಸಾಹಿತ್ಯ ಲೋಕದಲ್ಲಿ ಮಂಚೂಣಿಯಲ್ಲಿದ್ದಾರೆ
ನಾಡಿನ ಹಿರಿಯ ಸಾಹಿತಿಗಳಲ್ಲಿ ಒಬ್ಬರಾದ ಸಂಗಮೇಶ್ ಬಾದವಾಡಗಿ ಯವರು ನನಗೆ ಅತ್ಯಂತ ಆಪ್ತರಾಗಿದ್ದು ಅವರ ಸಾಹಿತ್ಯದ. ಸಾಂಸ್ಕೃತಿಕ. ಸಾಮಾಜಿಕ ಸೇವೆ ಅನನ್ಯವಾಗಿವೆ ಅವರು ಎಲೆಮರೆಕಾಯಿಯಂತೆ ಇಂತಹ ಸೇವೆಗಳಲ್ಲಿ ತೊಡಗಿಕೊಂಡಿದ್ದರು ಇಲ್ಲಿಯವರೆಗೆ ಸೂಕ್ತ ಸ್ಥಾನಮಾನ ಸಿಗದಿರುವುದು ಅತ್ಯಂತ ವಿಷಾದನೀಯ. ಇನ್ನು ಮುಂದಾದರೂ ಅವರನ್ನು ಗುರುತಿಸಿ ಸಾಹಿತ್ಯ ವಲಯದಲ್ಲಿ ಯಾವುದಾದರೂ ಉನ್ನತ ಸ್ಥಾನವನ್ನು ನೀಡುವ ಅವಶ್ಯಕತೆ ಇದೆ ಎಂದು ನಾನು ಭಾವಿಸುವೆ ಎಂದು ಅಭಿಪ್ರಾಯ ಪಟ್ಟರು
ಅವರ ಕಾಡು ಕಡಲಗಳ ನಾಡು ಅಂಡಮಾನ್ ಎಂಬ ಪ್ರವಾಸ ಕಥನ ಅಂಡಮಾನ್ ನಿಕೋಬಾರ ಚಿತ್ರಣವನ್ನು ಕಣ್ಣಿಗೆ ಕಟ್ಟುವ ಹಾಗೆ ಅಕ್ಷರಗಳನ್ನ ಪೋಣಿಸಿ ವೈವಿದ್ಯಮಯ ರಂಗುರಂಗಿನ ಚಿತ್ರಗಳೊಂದಿಗೆ ವಿವರಿಸಿ ಓದುಗರ ಮನಸ್ಸನ್ನು ಗೆದ್ದಿದ್ದಾರೆ.
ಈ ಕೃತಿಯ ಲೋಕಾರ್ಪಣೆ ಮಾಡುವುದು ನನಗೆ ಅತ್ಯಂತ ಖುಷಿ ಕೊಟ್ಟಿದೆ ಎಂದು ಅಭಿಮಾನದಿಂದ ಹೇಳಿದರು.

ಗಾದೆ ಹಳೆಯದಾದರೇನು ಅರ್ಥ ನವನವೀನ ಎಂಬ ಪ್ರಬಂಧವನ್ನು ಶ್ರೀಯುತ ಬಿ ಎಮ್ ಹಿರೇಮಠ್ ನಿವೃತ್ತ ಉಪನ್ಯಾಸಕರು, ಮುದ್ದೇಬಿಹಾಳ ಲೋಕಾರ್ಪಣೆಗೊಳಿಸಿ ಗಾದೆಗಳ ಮಹತ್ವ ಜೀವನದಲ್ಲಿ ಗಾದೆಗಳಿಗಿರುವ ಪ್ರಾಮುಖ್ಯತೆ ನೂರು ಪುಟಗಳ ವಿವರಣೆಯನ್ನು ಕೇವಲ ಒಂದು ಸಾಲಿನಲ್ಲಿ ಹೇಳುವ ಗಾದೆಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಿ ಗಾದೆಗಳು ಹಳೆಯದಾದರೂ ಇಂದಿಗೂ ಪ್ರಸ್ತುತವಾಗಿವೆ ಸಂದರ್ಭನುಸಾರವಾಗಿ ಗಾದೆಗಳನ್ನು ಬಳಸುವುದರಿಂದ ಸಾಹಿತ್ಯ ಭಾಷಣಕ್ಕೂ ಕೃತಿ ರಚನೆಯಲ್ಲಿ ಗಾದೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಬಾದವಾಡಗಿ ಅವರ ಈ ಪ್ರಬಂಧ ಲೇಖನ ಪುಸ್ತಕ ಚೆನ್ನಾಗಿ ಮೂಡಿ ಬಂದಿದೆ ಈ ರೀತಿಯ ಪುಸ್ತಕಗಳು ಹೆಚ್ಚಾಗಿ ಹೊರಬರಲಿ ಎಂದು ಆಶಿಸಿ ಪುಸ್ತಕವನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.
ಡಾ. ಬಸವರಾಜ ಬಲ್ಲೂರ್ ಬೀದರ್
ಅವರು ಎರಡು ಪುಸ್ತಕಗಳ ಕುರಿತು ಮಾರ್ಮಿಕವಾಗಿ ವಿಮರ್ಶೆ ಮಾಡುತ್ತಾ ಪುಸ್ತಕಗಳಲ್ಲಿನ ಮಹತ್ವದ ಸಂಗತಿಗಳನ್ನು ವಿವರಿಸಿದರು.
ಕಾಡು ಕಡಲಗಳ ನಾಡು ಅಂಡಮಾನ್ ಎಂಬ ಪ್ರವಾಸ ಕಥನಾದ ಕುರಿತು ವಿಶೇಷವಾಗಿ ಸಾಹಿತ್ಯ ಲೋಕದ ಚಿತ್ರಣವನ್ನು ಎಳೆ ಎಳೆಯಾಗಿ ಬಿಚ್ಚಿಡುತ್ತಾ ಅಂಡಮಾನ್ ಪ್ರವಾಸ ಕಥನವನ್ನು ಕಣ್ಣು ಕಟ್ಟುವ ಹಾಗೆ ವಿಶ್ಲೇಷಿಸಿ ವಿಮರ್ಶಿಸಿದರು.
ಒಂದು ಪುಸ್ತಕದ ಪ್ರಕಾರ ಪ್ರವಾಸವನ್ನು ದೇಶ ಸುತ್ತು ಕೋಶ ಓದು ಇವೆರಡರ ಅನುಭವಗಳಿಂದ ಆದೇಶದ ಸಂಸ್ಕೃತಿ ಸಾಮಾಜಿಕ ನಡವಳಿಕೆಗಳನ್ನು ಅರ್ಥೈಸಿಕೊಳ್ಳಬೇಕಾಗುತ್ತದೆ ನಾವು ಪ್ರವಾಸ ಕೈಕೊಂಡಾಗ ಅಲ್ಲಿನ ಪ್ರಮುಖವಾದ ಸ್ಥಳಗಳಿಗೆ ಭೇಟಿ ನೀಡಿ ವಾಪಸ್ ಆಗುತ್ತೇವೆ ಆದರೆ ಒಬ್ಬ ಸಾಹಿತಿ ಪ್ರವಾಸ ಕೈಕೊಂಡು ಅಲ್ಲಿನ ಸಂಸ್ಕೃತಿ ಭೌಗೋಳಿಕ ಹಾಗೂ ರಾಜಕೀಯ ವಿವರಣೆ ಅಭಿವೃದ್ಧಿ ಹಾಗೂ ನೋಡುವ ಸ್ಥಳಗಳ ವಿವರಣೆ ಈ ಎಲ್ಲ ಸಮಗ್ರತೆಗಳನ್ನು ತನ್ನ ಪ್ರವಾಸ ಕಥನದಲ್ಲಿ ಕಟ್ಟಿಕೊಡುತ್ತಾನೆ ಇದರಿಂದ ಆ ಪುಸ್ತಕವು ನಾವು ಆ ಸ್ಥಳಕ್ಕೆ ಹೋಗದೆ ಇದ್ದರೂ ಕೂಡ ಹೋಗಿ ಬಂದದ್ದಕ್ಕಿಂತ ಹೆಚ್ಚಿನ ಜ್ಞಾನವನ್ನು ನೀಡುತ್ತದೆ ಈ ಕೃತಿಯ ಬಗ್ಗೆ ಸಂಗಮೇಶ್ ಬಾದವಾಡಗಿ ಅವರು ತಾವು ಅಲ್ಲಿ ಕಳೆದ ದಿನಗಳಲ್ಲಿ ಅಂದಮಾನ ದ್ವೀಪಗಳ ವೈಶಿಷ್ಟ ನೈಸರ್ಗಿಕ ಚಲುವು ಕಾಡುಗಳು ಜರವಾ ಜನಾಂಗ ಸಮುದ್ರದ ಕಿನಾರೆಗಳು ಸ್ವಾತಂತ್ರ್ಯ ಸೇನಾನಿಗಳು ವೀರ ಸಾವರ್ಕರ್ ಇತರೆ ವಿಷಯ ಜೊತೆಗೆ ತಮ್ಮ ಮೋಜು ಮಸ್ತಿಯ ವಿವರಗಳನ್ನು ಲಘು ದಾಟಿಯಲ್ಲಿ ಕಟ್ಟಿಕೊಟ್ಟು ಉತ್ತಮವಾಗಿ ರಚಿಸಿರುವುದರಿಂದ ಈ ಕೃತಿ ಒಂದು ಮಾರ್ಗದರ್ಶನಂತೆ ಕೂಡ ಕೆಲಸ ಮಾಡಬಲ್ಲದು
ಎಂದು ವಿವರಿಸಿದರು
ಸಮಾರಂಭದಲ್ಲಿ
ಸಿದ್ದಯ್ಯ ಪುರಾಣಿಕ ಸ್ಮಾರಕ ಟ್ರಸ್ಟಿನ ಸಂಚಾಲಕರಾದ ಮಹೇಶ್ ಬಾಬು ಸುರ್ವೆ.
ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷರಾದ ಅರವಿಂದ ಮಾಲಗಿತ್ತಿ
ನಿವೃತ್ತ ಪೊಲೀಸ್ ಎಸ್ ಪಿ
ಬಸವರಾಜ್ ಮಾಲಗಿತ್ತಿ
ಸಾಹಿತಿ ಪತ್ರಕರ್ತ ಮೈಪಾಲ ರೆಡ್ಡಿ ಮುನ್ನೂರು. ಮಲ್ಲಿಕಾರ್ಜುನ್ ಕಡಕೋಳ
ಸಂಗಮೇಶ್ ಬಾದವಾಡಗಿ ಹಿತೈಷಿ ಬಳಗದ
ದಾಮೋದರ್ ಕೆ
ವೆಂಕಟರಮಣ ಸ್ವಾಮಿ
ಡಾಕಪ್ಪ
ಲೋಕಪ್ಪ ಎಂ
ಬಿಕೆ ವೆಂಕಟೇಶ್
ಉಪಸ್ಥಿತರಿದ್ದರು
ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿ ಸಿದರು.
ಸಂಗಮೇಶ್ ಬಾದವಾಡಗಿಯವರು ಆಡಳಿತದ ಜೊತೆಗೆ ಸಾಹಿತ್ಯ ಪಯಣದ ಬಗ್ಗೆ ವಿವರಿಸಿ ತಮ್ಮಿಂದ 25 ಕೃತಿಗಳು ಲೋಕಾರ್ಪಣೆಗೊಂಡಿದ್ದನ್ನ ಸ್ಮರಿಸಿದರು .
ವಕೀಲಾದ ಬಸವರಾಜ್ ಹಾಗೂ ಭತ್ತದವರನ್ನು ಸನ್ಮಾನಿಸಲಾಯಿತು.
ಪ್ರಾರ್ಥನೆಯನ್ನು ಕುಮಾರ್ ಮುತ್ತೇಶ್ ಶುಶ್ರಾವ್ಯ ವಾಗಿ ಹಾಡಿದರು.
ಉಪನ್ಯಾಸಕ ಡಾ. ವಿ ಎಸ್ ಹಿರೇಮಠ್ ರವರು ಸೊಗಸಾಗಿ ನಿರೂಪಿಸಿದರು
ಮಹೇಶ್ ಬಾಬು ವಂದಿಸಿದರು

WhatsApp Group Join Now
Telegram Group Join Now
Share This Article