ತ್ರೈ ಮಾಸಿಕ ಕೆಡಿಪಿ ಸಭೆ:: ತಾಲೂಕಿನ ಆಸ್ಪತ್ರೆಗಳನ್ನು ಸುಧಾರಿಸುವುದು ಯಾವಾಗ? ಶಾಸಕ ವಜ್ಜಲ್ ತರಾಟೆ

Laxman Bariker
ತ್ರೈ ಮಾಸಿಕ ಕೆಡಿಪಿ ಸಭೆ:: ತಾಲೂಕಿನ ಆಸ್ಪತ್ರೆಗಳನ್ನು ಸುಧಾರಿಸುವುದು ಯಾವಾಗ? ಶಾಸಕ ವಜ್ಜಲ್ ತರಾಟೆ
Oplus_2
WhatsApp Group Join Now
Telegram Group Join Now

ತ್ರೈ ಮಾಸಿಕ ಕೆಡಿಪಿ ಸಭೆ
ತಾಲೂಕಿನ ಆಸ್ಪತ್ರೆಗಳನ್ನು ಸುಧಾರಿಸುವುದು ಯಾವಾಗ? ಶಾಸಕ ವಜ್ಜಲ್ ತರಾಟೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ತಾಲೂಕಾ ಆಸ್ಪತ್ರೆಯಲ್ಲಿ ಸರಿಯಾದ ಚಿಕಿತ್ಸೆ ದೊರೆಯುತ್ತಿಲ್ಲವೆಂದು ದೂರುಗಳು ಬರುತ್ತವೆ ಸರಕಾರಿ ಆಸ್ಪತ್ರೆಗೆ ಬಡವರು ಬರುತ್ತಾರೆ ಅವರಿಗೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಹೇಗೆ ತಾಲೂಕಿನ ಎಲ್ಲಾ ಆಸ್ಪತ್ರೆಗಳಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವ ಆರೋಪಗಳು ಕೇಳಿಬರುತ್ತಿದ್ದು ಸುಧಾರಿಸುವುದು ಯಾವಾಗ ಎಂದು ತಾಲೂಕಾ ಆರೋಗ್ಯಾಧಿಕಾರಿ ಡಾ ಅಮರೇಶ ಪಾಟೀಲರಿಗೆ ಶಾಸಕ ಮಾನಪ್ಪ ವಜ್ಜಲರು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡ ಘಟನೆ ಜರುಗಿತು
ಅವರು ಪಟ್ಟಣದ ತಾಲೂಕಾ ಪಂಚಾಯ್ತಿ ಸಭಾಂಗಣದಲ್ಲಿ ನಡೆದ ಕೆಡಿಪಿ ಸಭೆಯ ಅಧ್ಯಕ್ಷತೆವಹಿಸಿ ಮಾತನಾಡುತ್ತಾ ಬಡವರು ಆಸ್ಪತ್ರೆಗೆ ಬಂದರೆ ಅಲ್ಲಿರುವ ಕೆಲ ವೈದ್ಯರು ತಮ್ಮ ಖಾಸಗಿ ಆಸ್ಪತ್ರೆಗೆ ಬರಲು ಹೇಳುತ್ತಾರಂತೆ ಹೆರಿಗಾಗಿ ಬಂದ ಹೆಣ್ಣುಮಗಳು ಶಾಸಕರ ಹತ್ತಿರ ಬರುತ್ತಾಳೆ ಎಂದರೆ ಎಂತಹ ಪರಸ್ಥಿತಿ ನಿರ್ಮಾಣವಾಗಿದೆ ತಾಲೂಕಿನ ಆಸ್ಪತ್ರೆಗಳಲ್ಲಿಯು ಮೂಲಸೌಕರ್ಯಗಳಿಲ್ಲ ವೈದ್ಯರಿಲ್ಲ ಎನ್ನುವ ಸಾಕಷ್ಟು ಆರೋಪಗಳಿಗೆ ಏನು ಕ್ರಮ ತೆಗೆದುಕೊಂಡಿದ್ದೀರಿ ಮಾಹಿತಿ ಕೊಡಿ ಎಂದು ತರಾಟಗೆ ತೆಗೆದುಕೊಂಡರು
ಕುಡಿಯುವ ನೀರು ಸರಬರಾಜು ಅಧಿಕಾರಿ ರಂಗಪ್ಪ ಮಾಹಿತಿ ನೀಡುವಾಗ ನಿಮಗೆ ಯಾವ ಊರಿನಲ್ಲಿ ಏನು ಸಮಸ್ಯೆ ಇದೆ ಹಣ ಎಷ್ಟು ಖರ್ಚು ಮಾಡಲಾಗಿದೆ ಎನ್ನುವುದರ ಬಗೆಗೆ ಸರಿಯಾದ ಮಾಹಿತಿ ಇಲ್ಲ ಹುನಕುಂಟಿ ಗ್ರಾಮದ ಕುಡಿಯುವ ನೀರಿನ ಸಮಸ್ಯೆ ಹದಗೆಟ್ಟಿದೆ ಶಾಸ್ವತ ಪರಿಹಾರಕ್ಕೆ ಏನು ಕ್ರಮಕೈಗೊಂಡಿದ್ದೀರಿ ಎಂದಾಗ ಅಧಿಕಾರಿ ರಂಗಪ್ಪ ಸರಿಯಾದ ಉತ್ತರ ಕೊಡದಿದಾಗ ಇದೆ ರೀತಿ ಮಾಡುತ್ತಾ ಹೊದರೆ ಸರಕಾರದ ಹಣಖರ್ಚು ಮಾಡಿ ಜನರಿಗೆ ನೀಡು ಕೊಡುವುದು ಯಾವಾಗ ಸರಿಯಾಗಿ ಕೆಲಸ ಮಾಡಿ ನಿಷ್ಕಾಳಕಿ ಸರಿಯಲ್ಲವೆಂದರು
ಜೆಸ್ಕಾA ಸರದಿ ಬಂದಾಗ ಎಇಇ ತಡವಾಗಿ ಸಭೆಗೆ ಬಂದರು ಸಭೆ ಇರುವುದು ಗೊತ್ತಿಲ್ಲವೆ ನಿಮಗೆ ಬರಲು ತೊಂದರೆಯಾದರೆ ಕೆಲಸಕ್ಕೆ ಯಾಕೆ ಬರುತ್ತೀರಿ ಕ್ಷೇತ್ರದಲ್ಲಿ ಜನತೆ ಸಾಕಷ್ಟು ಪ್ರಮಾಣದಲ್ಲಿ ವಿದ್ಯುತ್ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ ದೊಡ್ಡಿಗಳಲ್ಲಿ ಸಾಕಷ್ಟು ತೊಮದರೆ ಇದೆ ಅಲ್ಲಿಗೆ ಹೋಗಿ ನೊಡಿದ್ದೀರಾ ರೈತರಿಗೆ ಟಿಸಿ ೨೪ ಗಂಟೆಯಲ್ಲಿ ಕೊಡಬೇಕೆಂದು ಹೇಳಲಾಗುತ್ತಿದೆ ಆದರೆ ತಿಂಗಳುಗಳೆ ಕಳೆದರು ಟಿಸಿಕೊಡುತ್ತಿಲ್ಲವೆಂದರೆ ಏನರ್ಥ ಎಂದು ಜೆಸ್ಕಾಂ ಅಧಿಕಾರಿಗೆ ಮಾತಿನ ಚಾಟಿ ಬಿಸಿದರು ಅಲ್ಲಿಂದಲೆ ಜೆಸ್ಕಾಂ ನ ಇಇ ಮಾತನಾಡಿ ಕ್ಷೇತ್ರದಲ್ಲಿ ಸಾಕಷ್ಟು ಸಮಸ್ಯೆಗಳಿಗೆ ಸ್ಪಂದಿಸುವAತೆ ಸೂಚಿಸಿದರು
ಅರ£ಣ್ಯ ಇಲಾಖೆಯ ಸರದಿ ಬಂದಾಗ ತಾಲೂಕಾ ಅರಣ್ಯಾಧಿಕಾರಿ ವಿದ್ಯಾರವರು ಮಾಹಿತಿ ನೀಡುತ್ತಿರುವಂತೆ ಬಡರೈತರು ಬದುಕಲು ಉಳುಮೆ ಮಾಡಿರುತ್ತಾರೆ ಅಂತವರನ್ನು ಒಕ್ಕಲೆಬ್ಬಿಸುವ ಕೆಲಸ ಮಾಡಬಾರದೆಂದರು
ಕೃಷಿ, ಶಿಕ್ಷಣ,ಸಮಾಜ ಕಲ್ಯಾಣ ಪ,ಪಂ ಕಲ್ಯಾಣ ಬಿಸಿಎಂ ಅಲ್ಪಸಂಖ್ಯಾತ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿವರದಿ ಮಾಹಿತಿಗಳ ಚರ್ಚೆ ನಡೆಯಿತು
ಈ ಸಂದರ್ಭದಲ್ಲಿ ತಾಲೂಕಾ ಪಂಚಾಯ್ತಿ ಅಧಿಕಾರಿ ಅಮರೇಶ, ತಹಸೀಲ್ದಾರ ಗ್ರೇಡ೨ ಬಸವರಾಜ ಝಳಕಿಮಠ, ಡಾ ರೋಣಿ ಸೇರಿದಂತೆ ಇದ್ದರು

WhatsApp Group Join Now
Telegram Group Join Now
Share This Article