ಯೋಗ ಮಾನವನನ್ನು ರೋಗಮುಕ್ತ ಮಾಡಲು ಸಹಕಾರಿಯಾಗುತ್ತದೆ-ಇಓ ಅಮರೇಶ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಯೋಗವು ಮಾನವನ ದೇಹವನ್ನು ಶಾರೀರಿಕ ವಾಗಿ, ಆಧ್ಯಾತ್ಮಿಕ ವಾಗಿ, ಬೌದ್ಧಿಕ ವಾಗಿ ಸಂಯೋಜನೆ ಗೊಳಿಸಿ ಸಮತೋಲನದಲ್ಲಿರಿಸಿ ಮನುಷ್ಯ ನನ್ನು ರೋಗಮುಕ್ತಗೊಳಿಸುತ್ತದೆ ಎಂದು ತಾಲೂಕಾ ಪಂಚಾಯ್ತಿ ಕಾರ್ಯನಿರ್ವಾಹಕ ಅಧಿಕಾರಿ ಅಮರೇಶ ಹೇಳಿದರು
ಅವರು ಪಟ್ಟಣದ ಸರಕಾರಿ ಪಿಯು ಕಾಲೇಜು ಮೈದಾನದಲಿ ತಾಲೂಕಾಡಳಿತದಿಂದ ಏರ್ಪಡಿಸಿ ದ ಯೋಗದಿನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ 2015 ಜೂನ್ 21ರಿಂದ ದೇಶದಾದ್ಯಂತ ಪ್ರಪಂಚದಾದ್ಯಂತ ಯೋಗದಿನವನ್ನು ಆಚರಿಸಿಕೊಂಡು ಬರಲಾಗುತಿದೆ
ಯೋಗ ಕೇವಲ ಜೂನ್ 21ಕ್ಕೆ ಮಾತ್ರ ಸೀಮಿತವಾಗದೆ ಅದು ನಿತ್ಯದ ದಿನಚರಿಯಾಗಬೇಕು ಯೋಗದಿಂದ ಮಾನಸಿಕ,ದೈಹಿಕವಾಗಿ ಸದೃಢ ವಾಗುವುದರ ಮೂಲಕ ಸ್ವಾಸ್ಥ ಸಮಾಜ ನಿರ್ಮಾಣ ಕ್ಕೆ ನಾಂದಿಯಾಗುತ್ತದೆ ಎಂದರು
ಕಾರ್ಯಕ್ರಮ ದ ಕುರಿತು ಯೋಗಗುರು ಬಸಲಿಂಗಯ್ಯ ಹಿರೇಮಠ ಮಾತನಾಡಿ ನಂತರ ಯೋಗಕ್ಕೆ ಚಾಲನೆ ನೀಡಿದರು
ಈ ಸಂದರ್ಭದಲ್ಲಿ ಪ್ರಥಮ ದರ್ಜೆ ಗುತ್ತಿಗೆದಾರ ಶ್ರೀನಿವಾಸ ಅಮ್ಮಾಪುರ, ಬಿಇಓ ಹುಂಬಣ್ಣ ರಾಠೋಡ, ಚನ್ನಬಸವರಾಜ ಮೇಟಿ, ಪ್ರಾಚಾರ್ಯ ಮುರುಗೇಂದ್ರಪ್ಪ ಯೋಗ ಶಿಕ್ಷಕ ಅಶೋಕ ಬಿಜಾಪುರ,ಮಲ್ಲಿಕಾರ್ಜುನ ಗೌಡ,ಭೀಮನಗೌಡ ಶೇಖಪ್ಪ,ಉಮೇಶ ಸೇರಿದಂತೆ ಇದ್ದರು