ಭೀಮಣ್ಣನಾಯಕ ದಂಪತಿಗಳಿಗೆ ನೌಕರರ ಸಂಘದಿಂದ ಸನ್ಮಾನ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ತಾಲೂಕಾ ನೌಕರರ ಸಂಘದ ಅಧ್ಯಕ್ಷರಾಗಿ ಜಿಲ್ಲಾ ನೌಕರರ ಸಂಘದ ಅಧ್ಯಕ್ಷರಾಗಿ ಉತ್ತಮ ಸೇವೆ ಸಲ್ಲಿಸಿ ಇದೀಗ ನಿವೃತ್ತಿಯಾಗಿರುವ ಭೀಮಣ್ಣನಾಯಕ ಹಾಗೂ ದಂಪತಿಗಳನ್ನು ರಾಜ್ಯ ಸರಕಾರಿ ನೌಕರರ ಸಂಘದಿಂದ ಸನ್ಮಾನಿಸಲಾಯಿತು
ಪಟ್ಟಣದ ಶಂಕರರಡ್ಡಿ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘ ಜಿಲ್ಲಾ ಹಾಗೂ ತಾಲೂಕಾ ಘಟಕದಿಂದ ಏರ್ಪಡಿಸಿದ ಜಿಲ್ಲಾ ಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನಿವೃತ್ತಿಗೊಂಡ ಜಿಲ್ಲಾ ಹಾಗೂ ತಾಲೂಕಾ ನೌಕರರಿಗೆ ಭೀಳ್ಕೊಡುಗೆ ಹಾಗೂ ಸನ್ಮಾನ ಸಮಾರಂಭವನ್ನು ಏರ್ಪಡಿಸಿತ್ತು ಅದರಲ್ಲಿ ಭೀಮಣ್ಣ ನಾಯಕ ಹಾಗೂ ಅವರ ಧರ್ಮಪತ್ನಿಯವರಿಗೆ ನೌಕರರು ಅವರ ಅಭಿಮಾನಿಗಳು ಒಡನಾಡಿಗಳು ಸೇರಿದಂತೆ ಅವರನ್ನು ಸನ್ಮಾನಿಸಿದರು
ಭೀಮಣ್ಣನಾಯಕ ತಮ್ಮ ಅಧಿಕಾರವಧಿಯಲ್ಲಿ ಹಲವಾರು ನೌಕರರ ಸಮಸ್ಯೆಗಳಿಗೆ ಸ್ಪಂದಿಸಿ ಕೆಲಸ ಮಾಡಿದ್ದರು ಅವರ ನಿವೃತ್ತಿ ನಿಮಿತ್ಯವಾಗಿ ಅವರಿಗೆ ಸನ್ಮಾನಿಸಲು ರಾಜ್ಯದ್ಯಕ್ಷರಾದ ಸಿ ಎಸ್ ಷಡಕ್ಷರಿಯವರು ಆಗಮಿಸಿ ಸನ್ಮಾನ ಕಾರ್ಯಕ್ರಮದಲ್ಲಿ ಭಾಗಿಯಾಗಿ ಶುಭಹಾರೈಸಿದರು ನಿವೃತ್ತಿ ಜೀವನದಲ್ಲಿ ಇನ್ನು ಉತ್ತಮ ಸಾಧನೆಯಾಗಲಿ ಎಂದರು