ವಿವಿಧ ಅಂಗನವಾಡಿ ಕೇಂದ್ರಗಳಿಗೆ ನ್ಯಾ. ಮಂಜುಳಾ ಬೇಟಿ, ಪರಿಶೀಲನೆ

Laxman Bariker
ವಿವಿಧ ಅಂಗನವಾಡಿ ಕೇಂದ್ರಗಳಿಗೆ ನ್ಯಾ. ಮಂಜುಳಾ ಬೇಟಿ, ಪರಿಶೀಲನೆ
WhatsApp Group Join Now
Telegram Group Join Now

ವಿವಿಧ ಅಂಗನವಾಡಿ ಕೇಂದ್ರಗಳಿಗೆ ನ್ಯಾ. ಮಂಜುಳಾ ಬೇಟಿ, ಪರಿಶೀಲನೆ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು. ಜೂ.13.- ತಾಲೂಕಿನ ಈಚನಾಳ, ಗೊರೆಬಾಳ, ಈಚನಾಳ ತಾಂಡ, ಗೊರೆಬಾಳ ತಾಂಡಾ,ಜಲದುರ್ಗ ಸೇರಿದಂತೆ ವಿವಿಧ ಗ್ರಾಮಗಳ ಅಂಗನವಾಡಿ ಕೇಂದ್ರಗಳಿಗೆ ಲಿಂಗಸ್ಗೂರು ಜೆ.ಎಂ.ಎಫ್‌.ಸಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶರಾದ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪನವರು ಭೇಟಿ ನೀಡಿ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರಗಳ ಕುರಿತು ಪರಿಶೀಲನೆ ನಡೆಸಿದರು.

ಈಚನಾಳ ಕ್ರಾಸ್ ನಲ್ಲಿರುವ ಅಂಗನವಾಡಿ ಕೇಂದ್ರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಅವರು ಅಂಗನವಾಡಿ ಕೇಂದ್ರದ ಮಕ್ಕಳಿಗೆ ನೀಡುವ ಪೌಷ್ಟಿಕ ಆಹಾರದ ಗುಣಮಟ್ಟವನ್ನು ಪರೀಕ್ಷಿಸಿ ಸ್ವತಹ ತಾವೇ ಕೆಲವೊಂದು ಆಹಾರ ಪದಾರ್ಥಗಳನ್ನು ಸೇವಿಸಿ ಮಕ್ಕಳು ಸೇವಿಸುವ ಆಹಾರ ಪದಾರ್ಥಗಳ ಗುಣಮಟ್ಟ ಸರಿಯಾಗಿಲ್ಲದಿರುವುದನ್ನು ಗಮನಿಸಿದ ಅವರು ಸ್ಥಳದಲ್ಲಿದ್ದ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ರಾಜೇಶ್ವರಿ ಅವರಿಗೆ ಸೂಚಿಸಿ ಮಕ್ಕಳು ಸೇವಿಸುವ ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರೀಕ್ಷಿಸಿ ಅಂಗನವಾಡಿ ಕೇಂದ್ರಗಳಿಗೆ ಸರಬರಾಜು ಮಾಡಿ, ಎಂದ ಅವರು ಕೇಂದ್ರಕ್ಕೆ ಸರಬರಾಜಾದ ಆಹಾರ ಪದಾರ್ಥಗಳ ವಿವರವನ್ನು ಪಡೆದುಕೊಂಡು ಆಹಾರ ಪದಾರ್ಥಗಳ ಗುಣಮಟ್ಟವನ್ನು ಪರಿಶೀಲಿಸಿದರು.

ಇಂತಹ ಪದಾರ್ಥಗಳನ್ನು ಸರಬರಾಜು ಮಾಡಿದರೆ ಮಕ್ಕಳು ಸೇವಿಸುವುದಾದರೂ ಹೇಗೆ ಎಂದು ಪ್ರಶ್ನಿಸಿದ ಅವರು ಕೂಡಲೇ ಒಳ್ಳೆಯ ಗುಣಮಟ್ಟದ ಪದಾರ್ಥಗಳನ್ನು ನೀಡುವಂತೆ ಸೂಚಿಸಿದರು. ಅಂಗನವಾಡಿ ಕೇಂದ್ರದ ಮಕ್ಕಳೊಂದಿಗೆ ಚರ್ಚಿಸಿದ ಅವರು ದಿನನಿತ್ಯ ಮಕ್ಕಳಿಗೆ ನೀಡುವ ಆಹಾರದ ಕುರಿತು ಮಕ್ಕಳಿಂದ ಮಾಹಿತಿ ಪಡೆದರು.

ಅಂಗನವಾಡಿ ಕೇಂದ್ರದಲ್ಲಿ ಮಕ್ಕಳಿಗೆ ಶೌಚಾಲಯ, ಶುದ್ಧ ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳನ್ನು ಕೂಡಲೇ ಒದಗಿಸಿಕೊಡುವಂತೆ ಸ್ಥಳದಲ್ಲಿದ್ದ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ಮಕ್ಕಳೊಂದಿಗೆ ಸೇರಿ ಅಂಗನವಾಡಿ ಕೇಂದ್ರದ ಮುಂದುಗಡೆ ಸಸಿ ನೆಟ್ಟರು.

ತಾಲೂಕ ವಕೀಲರ ಸಂಘದ ಅಧ್ಯಕ್ಷರಾದ ಭೂಪನಗೌಡ ಪಾಟೀಲ್, ಎ.ಸಿ.ಡಿ.ಪಿ.ಓ ರಾಜೇಶ್ವರಿ, ಮೇಲ್ವಿಚಾರಕಿ ನಜ್ಮಾ, ನ್ಯಾಯಾಂಗ ಇಲಾಖೆಯ ವೆಂಕೋಬ ಗು ಡದನಾಳ, ಅಂಗನವಾಡಿ ಕಾರ್ಯಕರ್ತೆ ಸುಮಂಗಲಾ, ಪೊಲೀಸ್ ಸಿಬ್ಬಂದಿ ಸೇರಿದಂತೆ ಇತರರಿದ್ದರು.

WhatsApp Group Join Now
Telegram Group Join Now
Share This Article