ಪ್ರಧಾನಿಯಾಗಿ ನರೇಂದ್ರಮೋದಿ ಪ್ರಮಾಣವಚನ ಸ್ವೀಕಾರ ವಿಜಯೋತ್ಸವ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಸತತವಾಗಿ ಮೂರನೇ ಬಾರಿಗೆ ದೇಶದ ಪ್ರಧಾನಿಯಾಗಿ ನರೇಂದ್ರಮೋದೀಜಿಯವರು ಪ್ರಮಾಣ ವಚನ ಸ್ವೀಕರಿಸುತ್ತಿರುವಂತೆ ಪಟ್ಟಣದಲ್ಲಿ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರಿಂದ ಪಟಾಕಿ ಸಿಡಿಸಿ ಸಿಹಿಹಂಚಿ ಜಯಘೋಷಗಳನ್ನು ಕೂಗುತ್ತಾ ವಿಜಯೋತ್ಸವ ಆಚರಿಸಿದರು
ರವಿವಾರ ಸಂಜೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸುತ್ತಿರುವಂತೆ ಪಟ್ಟಣದಲ್ಲಿ ಬಿಜೆಪಿ ಮುಖಂಡರು ಹಾಗೂ ಕಾರ್ಯಕರ್ತರು ಸೇರಿ ಬಿಜೆಪಿ ಕಛೇರಿ ಮುಂಭಾಗ, ಹೊಸಬಸ್ ನಿಲ್ದಾಣ ಸರ್ಕಲ್ ಗಡಿಯಾರ ಚೌಕ ಹಾಗೂ ಬಸವಸಾಗರ ವೃತ್ತದಲ್ಲಿ ಪಟಾಕಿ ಸಿಡಿಸಿ ಸಿಹಿಹಂಚಿ ಸಂಭ್ರಮಾಚರಣೆ ಮಾಡುತ್ತಾ ವಿಜಯೋತ್ಸವ ಆಚರಿಸಿದರು
ಈ ಸಂದರ್ಭದಲ್ಲಿ ಬಿಜೆಪಿಯ ಹಿರಿಯ ಮುಖಂಡರಾದ ಗಿರಿಮಲ್ಲನಗೌಡ ಪಾಟೀಲ್, ಈಶ್ವರ ವಜ್ಜಲ್, ಅಯ್ಯಪ್ಪ ಮಾಳೂರು,ಬಸನಗೌಡ ಮೇಟಿ, ವೆಂಕನಗೌಡ ಪಾಟೀಲ್ ಯದನಾಳ, ಜ್ಯೋತಿ ಸುಂಕದ, ಮುದಕಪ್ಪನಾಯಕ, ನಾಗಭೂಷಣ, ದ್ಯಾಮಣ್ಣನಾಯಕ, ರಾಜು ತಂಬಾಕೆ, ಅಮರೇಶ ಗಂಭೀರಮಠ ಸೇರಿದಂತೆ ಇದ್ದರು