ಲಿಂಗಸಗೂರು:ಖಾರದಪುಡಿ ಎರಚಿ ಪಟ್ಟಣದ ಉದ್ಯಮಿಯೊಬ್ಬರ ಐದು ಲಕ್ಷ ದರೋಡೆ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು: ಪಟ್ಟಣದ ಉದ್ಯಮಿ ಶಿವಾನಂದ ಐದನಾಳರವರಿಗೆ ಖಾರದಪುಡಿ ಎರಚಿ ಐದುಲಕ್ಷ ದರೋಡೆ ಮಾಡಿದ ಘಟನೆ ಕೊಪ್ಪಳ ಜಿಲ್ಲೆಯ ಕಿಲ್ಲಾರಹಟ್ಟಿ ಹತ್ತಿರ ಮಂಗಳವಾರ ರಾತ್ರಿ ಜರುಗಿದೆ
ಲಿಂಗಸಗೂರು ಪಟ್ಟಣದ ಶಿವಾನಂದ ಐದನಾಳ ಕೊಪ್ಪಳ ದಲಿ ವ್ಯವಹಾರ ಕ್ಕಾಗಿ ಐದುಲಕ್ಷ ಹಣವನ್ನು ತೆಗೆದುಕೊಂಡು ಹೊರಟಿದ್ದರು
ಇನ್ನೋವಾ ಕಾರಿನಲಿ ಶಿವಾನಂದ ಐದನಾಳ ವಿಜಯ ಮಹಾಂತೇಶ ಪಲ್ಲೇದ ಹೊರಟಿದ್ದರು ಅವರ ಹಿಂದೆ ಬೇರೊಂದು ವಾಹನದಲಿ ಖಾಲಿದ್ ಚಾವೂಸ್ ಹೊರಟಿದ್ದರು ಕೊಪ್ಪಳ ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರ ಹತ್ತಿರದ ಕಿಲ್ಲಾರಹಟ್ಟಿಯ ಸಮೀಪದಲಿ ಪ್ರಯಾಣಿಸುತಿರುವಾಗ ಐವರು ದುಷ್ಕರ್ಮಿಗಳು ನಂಬರಪ್ಲೇಟ್ ಇಲ್ಲದ ಒಂದೇ ಬೈಕ್ ನಲಿ ಬಂದು ಕಾರನ್ನು ಅಡ್ಡಗಟ್ಟಿ ಒಳಗಿದ್ದವರ ಕಣ್ಣಿಗೆ ಖಾರದಪುಡಿ ಎರಚಿದ್ದಲ್ಲದೆ ಅವರ ಕುತ್ತಿಗೆ ಕೈಗೆ ರಟ್ಟೆಗೆ ಬ್ಲೇಡನಿಂದ ಗಾಯಗೊಳಿಸಿ ಕಾರಿನ ಒಳಗಿದ್ದ ಐದುಲಕ್ಷ ಹಣವಿರುವ ಚೀಲವನ್ನು ದೋಚಿ ಪರಾರಿಯಾಗಿದ್ದು ಗಾಯಾಳುಗಳನ್ನು ಆಸ್ಪತ್ರೆ ಯಲಿ ಚಿಕಿತ್ಸೆ ಗೆ ದಾಖಲಿಸಲಾಗಿದ್ದು ತಾವರಗೇರಾ ಠಾಣೆಯಲಿ ಪ್ರಕರಣ ದಾಖಲಾಗಿರುವುದಾಗಿ ತಿಳಿದು ಬಂದಿದೆ