ನಕಲಿನೋಟು ಚಲಾವಣೆ,ಲಿಂಗಸಗೂರಿನ ವ್ಯಕ್ತಿಸೇರಿ ನಾಲ್ಕು ಆರೋಪಿಗಳ ಬಂಧನ,೨೪೫ ನಕಲಿನೋಟು ಜಪ್ತಿ

Laxman Bariker
ನಕಲಿನೋಟು ಚಲಾವಣೆ,ಲಿಂಗಸಗೂರಿನ ವ್ಯಕ್ತಿಸೇರಿ ನಾಲ್ಕು ಆರೋಪಿಗಳ ಬಂಧನ,೨೪೫ ನಕಲಿನೋಟು ಜಪ್ತಿ
WhatsApp Group Join Now
Telegram Group Join Now

ನಕಲಿನೋಟು ಚಲಾವಣೆ,ಲಿಂಗಸಗೂರಿನ ವ್ಯಕ್ತಿಸೇರಿ ನಾಲ್ಕು ಆರೋಪಿಗಳ ಬಂಧನ,೨೪೫ ನಕಲಿನೋಟು ಜಪ್ತಿ

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸಗೂರು:ವಿಜಯಪುರ ನಗರದಲ್ಲಿ ಖೋಟಾನೋಟು ಚಲಾವಣೆ ಮಾಡುತ್ತಿದ್ದ ವ್ಯಕ್ತಿಯ ಬೆನ್ನು ಹತ್ತಿದ ವಿಜಯಪುರ ಪೊಲೀಸ್ ಲಿಂಗಸಗೂರಿನ ದುರಗಪ್ಪ ಪೂಜಾರಿ ಎನ್ನುವವರನ್ನು ಸೇರಿ ನಾಲ್ಕು ಜನ ಆರೋಪಿಗಳನ್ನು ಬಂಧಿಸಿ೫೦೦ ರೂ ಬೆಲೆಯ ೨೪೫ ನಕಲಿ ನೋಟುಗಳನ್ನು ವಶಪಡಿಸಿಕೊಂಡಿದ್ದಾರೆ
ಡಿ೨೯ರAದು ರಾತ್ರಿ ಎಂಟುಗAಟೆಯ ಸುಮಾರಿಗೆ ವಿಜಯಪುರದ ಗಾಂಧಿಚೌಕ ಪೊಲೀಸ್ ಠಾಣೆ ವ್ಯಾಪ್ತಿಯ ವಾಟರ ಟ್ಯಾಂಕ್ ಹತ್ತಿರದ ಹಾಲಿನ ಅಂಗಡಿಯಲ್ಲಿ ಹಾಲು ತೆಗೆದುಕೊಂಡು ೫೦೦ ರೂ ಮುಖಬೆಲೆಯ ಒಂದು ನೋಟು ನೀಡಿದ್ದಾನೆ ಹಾಲಿನವರಿಗೆ ಅನುಮಾನ ಬಂದು ಬೇರೆಕೊಡಲು ಹೇಳಿದ್ದಾರೆ ಆಗಲು ಅಂತಹುದೆ ನೋಟುಕೊಟ್ಟಾಗ ನಕಲಿನೋಟು ಚಲಾವಣೆ ಕುರಿತು ಪೊಲೀಸರಿಗೆ ತಿಳಿಸಿದಾಗ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಉಳಿದವರು ಸಿಕ್ಕಿದ್ದಾರೆ ಆತ ರಿಯಾಜ್ ತಂದೆ ಕಾಶೀಮಸಾಬ ವಾಲಿಕಾರ ವ೪೪ ಉ ಕೆಸೆ ಆರ್ ಟಿಸಿ ಮೆಕ್ಯಾನಿಕ್ ಸಾ ವಜ್ರಹನಮಾನ ನಗರ ವಿಜಯಪುರ ಆತನ ಬಳಿ ೫೦೦ ಮುಖಬೆಲೆಯ ೫ಖೋಟಾನೋಟುಗಳು ದೊರಕಿವೆ
ನಂತರ ಎಸ್ಪಿ ವಿಜಯಪುರ ಲಕ್ಷö್ಮಣ ನಿಂಬರಗಿಯವರ ಮಾರ್ಗದರ್ಶನದಲ್ಲಿ ತಂಡವನ್ನು ರಚಿಸಿ ಉಳಿದವರಿಗೆ ಶೋಧ ನಡೆಸಿದಾಗ ಲಿಂಗಸಗೂರಿನಲ್ಲಿ ದುರಗಪ್ಪ ತಂ ಶಿವಣಪ್ಪ ರಾಮರಟ್ಟಿ ವ೪೪ ಈತನನ್ನು ಲಿಂಗಸಗೂರಿನಲ್ಲಿ ವಶಕ್ಕೆ ಪಡೆದು ೫೦೦ ರೂ ಮುಖಬೆಲೆಯ ೨೦ ನೋಟುಗಳನ್ನು ವಶಕ್ಕೆ ಪಡೆದಿದ್ದಾರೆ ಆತನ ಹೇಳಿಕೆಯ ಮೇಲೆರೆಗೆ ಮಹಾಲಿಂಗಪುರದ ಕಿರಣ@ಭೀಮಪ್ಪ ತಂ ರಾಮಪ್ಪ ಹರಿಜನ ವ೨೫ ಈತನನ್ನು ಮಹಾಲಿಂಗಪುರದಲ್ಲಿ ವಶಕ್ಕೆ ಪಡೆದಿದು ಈತನಿಂದ ೫೦೦ ರೂ ಮುಖ ಬೆಲೆಯ ೧೦೦ ಖೋಟಾನೋಟುಗಳನ್ನು ವಶಕ್ಕೆ ಪಡೆದಿದ್ದಾರೆ ನಂತರ ಕಿರಣ ಹೇಳಿಕೆಯಂತೆ ಹೊಳೆಹಂಗರಗಿ ಗ್ರಾಮಕ್ಕೆ ಹೋಗಿ ರಮೇಶ ತಂ ಹಣಮಂತ ಸವಳತೋಟ ವ೪೪ ಈತನನ್ನು ಹೊಳೆಹಂಗರಗಿ ಗ್ರಾಮದಲ್ಲಿ ವಶಕ್ಕೆ ಪಡೆದು ತನಿಂದ ೫೦೦ ಮುಖಬೆಲೆಯ೧೨೦ ನೋಟುಗಳನ್ನು ಜಪ್ತು ಮಾಡಲಾಗಿದೆ
ಸದರಿ ಪ್ರಕರಣದಲ್ಲಿ ನಾಲ್ಕು ಜನ ಆರೋಪಿಗಳನ್ನು ದಸ್ತಗಿರಿ ಮಾಡಿ ಅವರಿಂದ ೫೦೦ ಮುಖ ಬೆಳೆಯ೧೨೨೫೦೦ ರೂ ಮೊತ್ತದ ಒಟ್ಟು ೨೪೫ ಖೋಟಾನೋಟುಗಳನ್ನು ಜಪ್ತುಪಡಿಸಿಕೊಮಡು ಆರೋಪಿತರನ್ನು ನ್ಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ
ಸದರಿ ಪ್ರಕರಣದಲ್ಲಿ ಉತ್ತಮವಾಗಿ ಕರ್ತವ್ಯ ನಿರ್ವಹಿಸಿದ ಪ್ರದೀಪ ತಳಕೇರಿ ಪಿಐ ಗಾಂಧಿಚೌಕ,ಪಿಎಸೈ ಗಳಾದ ರಾಜು ಮಮದಾಪುರ, ಸುಸ್ಮಾ ನಂದಿಗೋಣ, ಅನಿಲ್, ದೊಡ್ಡಮನಿ, ರಾಜು ವಿ ನಾಯಕ, ಎಸ್,ಪಿ ಗದ್ಯಾಳ, ಜಿ ಎಚ್ ಮುಲ್ಲಾ, ಕೆ,ಜಿ ರಾಠೋಡ್, ವಿ ಎಚ್ ಕಡ್ಲಿಬಾಳು, ಆರ್ ಎಸ್ ಗೋಧೆ, ಬಸವರಾಜ ದಿನ್ನಿ, ಎಚ್ ಎಚ್ ಜಮಾದಾರ, ಗುಂಡು ಗಿರಣಿವಡ್ಡರ, ಸುನೀಲ್ ಗವಳಿ, ಇವರ ಕಾರ್ಯವನ್ನು ಇಲಾಖೆ ಶ್ಲಾಘಿಸಿದೆ

WhatsApp Group Join Now
Telegram Group Join Now
Share This Article