*ಲಿಂಗಸುಗೂರು: ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತ್ತಿನಲ್ಲಿ 1741 ಬಾಕಿ ಪ್ರಕರಣಗಳು ಹಾಗೂ ವಾಜ್ಯ ಪೂರ್ವ ಪ್ರಕರಣಗಳು 8124ಇತ್ಯಾರ್ಥ.*
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸುಗೂರು ಜುಲೈ-13 : ಇಂದು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ರಾಯಚೂರು ಹಾಗೂ ತಾಲೂಕು ಕಾನೂನು ಸೇವಾ ಸಮಿತಿ ಲಿಂಗಸುಗೂರು ತಾಲೂಕು ವಕೀಲರ ಸಂಘ ಲಿಂಗಸುಗೂರು ವತಿಯಿಂದ ನ್ಯಾಯಾಲಯದಲ್ಲಿ ರಾಷ್ಟ್ರೀಯ ಲೋಕ ಅದಾಲತನ್ನು ಯಶಸ್ವಿಯಾಗಿ ನಡೆಸಲಾಯಿತು.
ಸಿವಿಲ್ ಪ್ರಕರಣಗಳು ಒಟ್ಟು -50 ಪ್ರಕರಣಗಳು ಮೊತ್ತ 53,80828/-ಕ್ಕೆ ಇತ್ಯಾರ್ಥವಾಗಿವೆ. ಹಾಗೂ ಕ್ರೀಮಿನಲ್ ಪ್ರಕರಣಗಳು ಒಟ್ಟು- 1691 ಪ್ರಕರಣಗಳು ಮೊತ್ತ – 95,82974/-ಕ್ಕೆ ಇತ್ಯಾರ್ಥವಾಗಿವೆ, ಇನ್ನೂ ವಾಜ್ಯ ಪೂರ್ವ ಪ್ರಕರಣಗಳು-8124 ಮೊತ್ತ – 2,51,52,196/- ಕ್ಕೆ ಈ ರೀತಿಯಾಗಿ ಲಿಂಗಸುಗೂರು ನ್ಯಾಯಾಲಯದಲ್ಲಿ ಪ್ರಕರಣಗಳು ರಾಜಿಯಾಗುವ ಮೂಲಕ ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ ಇತ್ಯಾರ್ಥವಾಗಿರುತ್ತವೆ. ಮಾನ್ಯ ಗೌರವಾನ್ವಿತ ಹಿರಿಯ ಶ್ರೇಣಿ ನ್ಯಾಯಾಧೀಶರಾದ ಶ್ರೀಮತಿ ಉಂಡಿ ಮಂಜುಳಾ ಶಿವಪ್ಪ ಹಾಗೂ ಪ್ರಧಾನಿ ಸಿವಿಲ್ ನ್ಯಾಯಾಧೀಶರಾದ ಅಂಬಣ್ಣ. ಕೆ ಹಾಗೂ ವಕೀಲರು ಸಂಘದ ಅಧ್ಯಕ್ಷರಾದ ಭೂಪನಗೌಡ ವಿ ಪಾಟೀಲ್, ಹಾಗೂ ನ್ಯಾಯಾಲಯದ ಸಿಬ್ಬಂದಿಗಳು ಹಾಗೂ ವಕೀಲರು ಪಕ್ಷಗಾರರು ಹಾಜರಿದ್ದರು.