ಮಸ್ಕಿ; ಬೆಲೆ ಬಾಳುವ ರಕ್ಷಿತ ಅರಣ್ಯ 16ಎಕರೆ ಖಾಸಗಿಯವರಿಗೆ ಆಕ್ರಮ ಪಟ್ಟಾ ಮಸ್ಕಿ ತಹಸೀಲ್ದಾರಗೆ ನೋಟಿಸ..!

Laxman Bariker
ಮಸ್ಕಿ; ಬೆಲೆ ಬಾಳುವ ರಕ್ಷಿತ ಅರಣ್ಯ 16ಎಕರೆ ಖಾಸಗಿಯವರಿಗೆ ಆಕ್ರಮ ಪಟ್ಟಾ ಮಸ್ಕಿ ತಹಸೀಲ್ದಾರಗೆ ನೋಟಿಸ..!
Oplus_131072
WhatsApp Group Join Now
Telegram Group Join Now

ಕೇಂದ್ರ ಅರಣ್ಯ ಕಾಯ್ದೆ ಉಲ್ಲಂಘನೆ::
ಮಸ್ಕಿ; ಬೆಲೆ ಬಾಳುವ ರಕ್ಷಿತ ಅರಣ್ಯ 16ಎಕರೆ ಖಾಸಗಿಯವರಿಗೆ ಆಕ್ರಮ ಪಟ್ಟಾ ಮಸ್ಕಿ ತಹಸೀಲ್ದಾರಗೆ ನೋಟಿಸ..!

ಕಲ್ಯಾಣ ಕರ್ನಾಟಕ ವಾರ್ತೆ

ಲಿಂಗಸುಗೂರ:ಕೋಟಿಗಟ್ಟಲೆ ಬೆಲೆ ಬಾಳುವ ರಕ್ಷಿತ ಅರಣ್ಯ ಪ್ರದೇಶದ 16 ಎಕರೆ ಜಮೀನು ಖಾಸಗಿಯವರಿಗೆ ಅಕ್ರಮ ಪಟ್ಟಾಮಾಡಿ ಪಹಣಿಯಲ್ಲಿ ನಮೂದಿಸಿರುವುದಕ್ಕೆ ಸಹಾಯಕ ಆಯುಕ್ತರ ಕೋರ್ಟನಿಂದ ಮಸ್ಕಿ ತಹಸೀಲ್ದಾರವರಿಗೆ ದಿ೨೫ ರಂದು ಹಾಜರಾಗಲು ನೋಟಿಸಿ ಜಾರಿಯಾಗಿದೆ
ಮಸ್ಕಿ ತಾಲೂಕಿನ ತಲೆಖಾನ ಹೊಬಳಿಯ ಬಗ್ಗಲಗುಡ್ಡ ಗ್ರಾಮದ ಸರ್ವೇನಂ 28ವಿಸ್ತಿರ್ಣ447.3 ಎಕರೆ ಪೈಕಿ ಒಟ್ಟು 16 ಎಕರೆ ಕ್ಷೇತ್ರ ಅರಣ್ಯ ಭೂಮಿಯನ್ನು ಯರದೋಡ್ಡಿ ತಾಂಡಾದ ಜನರಿಗೆ ಮರುಹಂಚಿಕೆ ಮಾಡಿ ತಹಸಿಲ್ದಾರ ಮಸ್ಕಿ ಇವರು ವರ್ಗಾವಣೆ ಸಂಖ್ಯೆಎಚ್-೯/೨೦೨೩-೨೪ ೨೩-೨-೨೦೨೪ರಂದು ಮರು ಹಂಚಿಕೆ ಮಾಡಿರುವದಾಗಿದೆ.

ಲಿಂಗಸುಗೂರ ವಲಯ ಅರಣ್ಯಾಧಿಕಾರಿಗಳು ಪ್ರಾದೇಶೀಕ ವಲಯರವರು ಮಸ್ಕಿ ತಹಶೀಲ್ದಾರ ಸೇರಿದಂತೆ 8ಜನ ರೈತರ ವಿರುದ್ದ೧೧-೬-೨೦೨೪ರಂದು ಸಹಾಯಕ ಆಯುಕ್ತರ ನ್ಯಾಯಾಲಯ ಮೇಲಮನವಿ ಸಲ್ಲಿಸಿ ರಕ್ಷಿತ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ 8ಜನರಿಗೆ ಮರುಹಂಚಿಕ ಮಾಡಿದ್ದು ರದ್ದುಪಡಿಸಲು ಕೋರಿದಾರೆ
ಅರಣ್ಯ(ಸಂರಕ್ಷಣಾ ) ಕಾಯ್ದೆ ೧೯೮೦ ರ ಕಲಂ೨ಪ್ರಕರ ಕೇಂದ್ರ ಸರಕಾರದ ಪೂರ್ವ ಅನುಮತಿ ಇಲ್ಲದೆ ಯಾವದೆ ವರ್ಗದ ಅರಣ್ಯ ಭೂಮಿಯನ್ನು ಅರಣ್ಯೇತರ ಚಟುವಟಿಕೆಗೆ ಬಳಸಿಕೊಳ್ಳಲು ಅವಕಾಶ ವಿರುವುದಿ¯್ಲ ಅರಣ್ಯವೆಂಬ(ಯಾವದೆ ವರ್ಗದ) ಭೂಮಿಗಳಿಗೆ ಸಂಭಂದಿಸಿದಂತೆ ಘನಸರ್ವೋಚ್ಚ ನ್ಯಾಯಲಯದ ರಿಟ್ಟಿ ಪಿಟೇಷನ( ಸಿವಿಲ್) ಸಂಖ್ಯ ೨೦೨/೧೯೯೫ರ ಜಾರಿಗೆ ಬಂದಿದೆ.
ಅರಣ್ಯ ಕಾನೂನು ಉಲ್ಲಂಘಿಸಿದ್ದಲ್ಲದೆ ಮೇಲಾಧಿಕಾರಿಗಳ ಗನಮಕ್ಕೆ ತರದೆ ಹಲವಾರು ವರ್ಷಗಳ ನಂತರ ಮಸ್ಕಿ ತಹಶೀಲ್ದಾರ ಅರಣ್ಯ ಭೂಮಿ ಹಂಚಿಕೆ ಮಾಡಿದ್ದು ಸಂಶಯಕ್ಕೆ ಎಡೆಮಾಡಿದೆ

ಈಕೃತ್ಯದಲ್ಲಿ ಸಂಬಂಧಿಸಿದ ಕಂದಾಯ ನಿರೀಕ್ಷರಾಗಲಿ ಗ್ರಾಮಲೆಕ್ಕಿಗರಗಲ್ಲಿ ಸೂಕ್ತ ವರದಿ ಪಡೆಯದೆ ಕ್ರಮಕ್ಕೆ ಮುಂದಾದ್ದಾರೆಂದು ಹೇಳಲಾಗುತ್ತಿದ್ದು ಸದರಿ ತಹಸೀಲ್ದಾರ ಹಾಗೂ ಕಂದಾಯ ಸಿಬ್ಬಂದಿ ಕಛೇರಿಯ ಸಹಾಯಕರು ಅಕ್ರಮದಲ್ಲಿ ಶಾಮಿಲಾಗಿರುವುದರ ಬಗೆಗೆ ಈಗ ಚರ್ಚೆ ವಿಷಯವಾಗಿದೆ

 

WhatsApp Group Join Now
Telegram Group Join Now
Share This Article