ರಾಷ್ಟ್ರೀಯ ಸೇವಾ ಯೋಜನಾ ವಿಶೇಷ ಶಿಬಿರ:
ಪರಿಸರ ನಾಶವಾದರೆ ಜೀವ ಸಂಕುಲಕ್ಕೆ ಕುತ್ತು-ವಿಜಯಕುಮಾರ
ಕಲ್ಯಾಣ ಕರ್ನಾಟಕ ವಾರ್ತೆ
ಲಿಂಗಸಗೂರು:ಪರಿಸರ ಚನ್ನಾಗಿದ್ದರೆ ಜೀವಿಗಳೆಲ್ಲ ಉತ್ತಮವಾಗಿ ಜೀವಿಸಬಹುದು ಆದರೆ ಪರಿಸರ ನಾಶವಾದರೆ ಜೀವಸಂಕುಲಕ್ಕೆ ಕುತ್ತು ಎಂದು ತಾಲೂಕಾ ಅರಣ್ಯ ಅಧಿಕಾರಿ ವಿಜಯಕುಮಾರ ಹೇಳಿದರು
ಅವರು ಪುರಸಭೆ ವ್ಯಾಪ್ತಿಯ ಕರಡಕಲ್ ಗ್ರಾಮದಲ್ಲಿ ಎಸ್ ಎಂ ಎಲ್ ಜಿ ಮಹಾವಿದ್ಯಾಲಯ ಏರ್ಪಡಿಸಿದ ರಾಷ್ಟಿçÃಯ ಸೇವಾ ವಿಶೇಷ ಶಿಬಿರ ಆರನೆ ದಿನದ ಕಾರ್ಯಕ್ರಮದಲ್ಲಿ ಪರಿಸರ ಮತ್ತು ಜೀವನ ಕುರಿತು ಉಪನ್ಯಾಸ ನೀಡಿದ ಅವರು ಗಿಡಮರ ಪಕ್ಷಿ ಪ್ರಾಣಿ ಸಂಕುಲ ಸೇರಿದಂತೆ ಏನೆಲ್ಲ ಜೀವಿಗಳು ಪರಿಸರ ಚನ್ನಾಗಿದ್ದರೆ ಮಾತ್ರ ಜೀವಿಸಬಲ್ಲವು ಇಲ್ಲವಾದರೆ ಜೀವಿಗಳಿಗೆ ಕುತ್ತು ಖಂಡಿತ ಬರುತ್ತದೆ ರಾಯಚೂರು ಜಿಲ್ಲೆಯಲ್ಲಿ ಅರಣ್ಯ ಕೇವಲ ೫% ರಷ್ಟು ಮಾತ್ರ ಇದೆ ಇಲ್ಲಿಯ ಪಕ್ಷಿ ಸಂಕುಲವು ಅಪಾಯದಲ್ಲಿದೆ ಪ್ರಾಣಿಗಳ ಬಗೆಗೂ ಅಧ್ಯಯನ ಮಾಡಲಾಗಿದ್ದು ಹಲವು ಅಳಿವಿನ ಅಂಚಿನಲ್ಲಿವೆ ಅದಕ್ಕಾಗಿ ನಾವು ಪರಿಸರ ಹಾಗೂ ತಾಯಿ ಈ ಎರಡನ್ನು ಬಹಳ ಕಾಳಜಿಪೂರ್ವಕವಾಗಿ ಕಾಣಬೇಕಾಗಿದೆ
ಕೊರೊನಾ ಸಂದರ್ಭದಲ್ಲಿ ಆಮ್ಲಜನಕವನ್ನು ಹಣಕೊಟ್ಟು ಪಡೆಯಬೇಕಾದ ಸಂದರ್ಭವಿತ್ತು ಪರಿಸರ ನಮಗೆ ಉಚಿತವಾಗಿಯೆ ಉತ್ತಮ ಗಾಳಿ ನೀಡುತ್ತದೆ ಆದರೆ ಅದನ್ನು ನಾವು ಅರಿಯದೆ ಅರಣ್ಯವನ್ನು ತಿಳಿದು ತಿಳಿದು ನಾಶ ಮಾಡುತ್ತಿರುವುದು ದುರಂತವಾಗಿದ್ದು ಪರಿಸರ ಹಾನಿ ಮಾಡಿದರೆ ಅಪಾಯ ನಮಗೆ ಕಟ್ಟಿಟ್ಟಬುತ್ತಿ ಅದಕ್ಕಾಗಿ ಪರಿಸರವನ್ನು ಉಳಿಸಿಬೆಳೆಸುವ ಪಣತೊಡೋಣ ಎಂದು ಹೇಳಿದರು
ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ ಹಿರಿಯ ಪತ್ರಕರ್ತ ಲಕ್ಷö್ಮಣ ಬಾರಿಕೇರ್ ಮಾತನಾಡುತ್ತಾ ಶಿಕ್ಷಣ ಕಲಿಕೆ ಭರಾಟೆಯಲ್ಲಿ ಮಕ್ಕಳಿಗೆ ಆಟ ಆಡಲು ಬಿಡುವಿಲ್ಲದಂತಾಗಿದ್ದು ದೈಹಿಕ ಶ್ರಮವಿಲ್ಲದೆ ಆರೋಗ್ಯದ ತೊಂದರೆ ಪಡುವಂತಾಗಿದೆ ಶಿಕ್ಷಣದ ಜೊತೆಗೆ ನಮ್ಮ ನೆಲದ ಹಿರಿಮೆ ಗರಿಮೆಗಳ ಬಗೆಗೂ ಮಾಹಿತಿ ವಿದ್ಯಾರ್ಥಿಗಳಿಗೆ ಅಗತ್ಯವಾಗಿದೆ ಹಾಗೆ ಪರೀಕ್ಷೆಯಲ್ಲಿ ವಿಫಲರಾದಾಗ ಜೀವ ಕಳೆದುಕೊಳ್ಳುವಂತ ದುಸ್ಸಾಹಸಕ್ಕೆ ಕೈಹಾಕಬಾರದು ಯಾಕೆಂದರೆ ಜೀವನದಲ್ಲಿ ಪರೀಕ್ಷೆ ಒಂದೆ ಕೊನೆ ಅಲ್ಲ ಸಾಕಷ್ಟು ಆಯಾಮಗಳಿಗೆ ಅವುಗಳ ಮೂಲಕ ಜೀವನ ರೂಪಿಸಿಕೊಳ್ಳಬಹುದಾಗಿದೆ ಅದರ ಜೊತೆಗೆ ದಹಿಕ ಶ್ರಮದ ಕೆಲಸಕಾರ್ಯಗಳನ್ನು ಮಾಡುತ್ತಾ ಸದೃಢದೇಹ ಬೆಳೆಸಿಕೊಳ್ಳಬೇಕು ಆರೊಗ್ಯ ಕಾಪಾಡಿಕೊಂಡು ಸುಂದರ ಜೀವನ ರೂಪಿಸಿಕೊಳ್ಳಬೇಕು ಸಮಾಜ ಪರಿಸರ ಮತ್ತು ಮಾನವನ ಬಂಧುತ್ವ ಜೊತೆಯಾಗಸಾಗಬೇಕು ಎನ್ನುವುದನ್ನು ಇಂತಹ ಶಿಬಿರಗಳು ಪಾಠ ಕಲಿಸುತ್ತವೆ ಎಂದು ಹೇಳಿದರು
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ ದೊಡ್ಡನಗೌಡ ಪಾಟೀಲ್ ಮಾತನಾಡುತ್ತಾ ಜೀವನದಲ್ಲಿ ಸೇವಾ ಮನೋಭಾವ ಬಹಳ ಮುಖ್ಯವಾಗಿದ್ದು ಅದನ್ನು ರೂಢೀಸಿಕೊಂಡು ಮುನ್ನೆಡೆದಾಗ ಜೀವನ ಸಾರ್ಥಕ ಎಂದರು
ಈ ಸಂದರ್ಭದಲ್ಲಿ ಉಪನ್ಯಾಸಕರಾದ ಚಂದ್ರಶೇಖರ ರಾಠೋಡ, ಶಾಂತಾ ನೆಲೋಗಿ, ಮುಖಂಡರಾದ ನಾಗರಾಜ ತಳಿಗೇರಿ, ಎಂ,ಡಿ ಅನೀಪ್ ಸಾಬ, ಸೇರಿದಂತೆ ಇದ್ದರು ನಂತರ ವಿದ್ಯಾರ್ಥಿಗಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು